Skip to playerSkip to main content
  • 8 years ago
Tollywood Actress Samantha spent one week without phone.check out the video for more inoformation

ಫೋನ್ ಒಂದು ಇದ್ದುಬಿಟ್ಟರೆ ಸಾಕು, ಇಡೀ ಜಗತ್ತೇ ಅಂಗೈಯಲ್ಲಿ ಇದ್ದಂತೆ. ಮೂರು ಹೊತ್ತು ಫೋನ್ ನಲ್ಲಿ ಮುಳುಗಿರುವ ಅಣ್ತಮ್ಮಂದಿರು, ಅಕ್ಕತಂಗಿಯರಿಗೆ ಫೋನೇ ಎಲ್ಲ. ಬೇರೆ ಯಾರೂ ಬೇಕಾಗಿಲ್ಲ.!

ಮನೆಯಲ್ಲಿ ಯಾರ ಜೊತೆ ಮಾತನಾಡದಿದ್ದರೂ ಪರ್ವಾಗಿಲ್ಲ, ಕೈಯಲ್ಲಿ ಫೋನ್ ಒಂದು ಇದ್ದರೆ ಸಾಕು ಎನ್ನುವ ಮಟ್ಟಕ್ಕೆ ಯುವ ಪೀಳಿಗೆ ಬೆಳೆದು ನಿಂತಿರುವಾಗ, ಫೋನ್ ಇಲ್ಲದೆ ಒಂದು ವಾರ ಕಳೆಯಲು ನಿಮ್ಮಿಂದ ಸಾಧ್ಯವೇ.?


ನಿಮ್ಮ ಕೈಯಲ್ಲಿ ಇದು ಸಾಧ್ಯವೋ, ಇಲ್ಲವೋ ನಿಮಗೆ ಬಿಟ್ಟಿದ್ದು. ಆದ್ರೆ, ನಟಿ ಸಮಂತಾರಿಂದ ಮಾತ್ರ ಇದು ಸಾಧ್ಯವಾಗಿದೆ. ಫೋನ್ ಇಲ್ಲದೇ ಒಂದು ವಾರ ಕಳೆದಿದ್ದಾರೆ ನಟಿ ಸಮಂತಾ. ಹಾಗಂತ ಸ್ವತಃ ನಟಿ ಸಮಂತಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ಅಷ್ಟಕ್ಕೂ, ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರಂಗಸ್ಥಲಂ 1985' ಚಿತ್ರದಲ್ಲಿ ಶೂಟಿಂಗ್ ನಲ್ಲಿ ಸಮಂತಾ ಭಾಗವಹಿಸಿದ್ದರು. ಚಿತ್ರದ ಚಿತ್ರೀಕರಣ ಅರಣ್ಯದ ಬುಡಕಟ್ಟು, ಗುಡ್ಡಗಾಡು ಪ್ರದೇಶಗಳಲ್ಲಿ ನಡೆದ ಕಾರಣ ಮೂಲಭೂತ ಸೌಕರ್ಯಗಳ ಜೊತೆಗೆ ನೆಟ್ ವರ್ಕ್ ಪ್ರಾಬ್ಲಂ ಕೂಡ ಇತ್ತು.

ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ವಾರ ಚಿತ್ರೀಕರಣ ಮಾಡಿದ್ದರಿಂದ, ನೆಟ್ ವರ್ಕ್ ಇಲ್ಲದೇ ತಮ್ಮ ಸ್ಮಾರ್ಟ್ ಫೋನ್ ನ ಸೈಡ್ ಗೆ ತಳ್ಳಿದ್ದರಂತೆ ಸಮಂತಾ. ''ಫೋನ್ ಇಲ್ಲದೇ ಒಂದು ವಾರ ಕಾಲ ಕಳೆದದ್ದು ಅಷ್ಟೊಂದು ಕೆಟ್ಟದಾಗಿ ಇರಲಿಲ್ಲ'' ಎಂದಿರುವ ಸಮಂತಾ, ''ಮತ್ತೆ ಹೀಗೆ ಮಾಡಲು ಸಾಧ್ಯವಿಲ್ಲ'' ಎಂಬುದನ್ನೂ ಒಪ್ಪಿಕೊಂಡಿದ್ದಾರೆ. ಅಂದ್ಹಾಗೆ, ಸಮಂತಾ ರಂತೆ ಫೋನ್ ಬಿಟ್ಟಿರಲು ನಿಮ್ಮಿಂದ ಸಾಧ್ಯವೇ.?

Category

🗞
News
Be the first to comment
Add your comment

Recommended