ಬೀದರ್: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ತಪಾಸಣೆ ನಂತರ ಇದು ಹುಸಿ ಬೆದರಿಕೆ ಎಂಬುದು ಗೊತ್ತಾಗಿದೆ. ನಕಲಿ ಐಡಿ ಮೂಲಕ ಇ-ಮೇಲ್ ಮಾಡಲಾಗಿದೆ. ಚೆನ್ನೈ ಮೂಲದ ಬಾಲಕ ಈ ಸಂದೇಶ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರ್‌ಡಿಎಕ್ಸ್, ಐಇಡಿ ಇಡಲಾಗಿದ್ದು, ಸ್ಫೋಟಗೊಳ್ಳಲಿವೆ. ಹೀಗಾಗಿ, ಮಧ್ಯಾಹ್ನ ಎರಡು ಗಂಟೆ ಒಳಗೆ ಜಾಗ ಖಾಲಿ ಮಾಡಿ ಎಂದು ಸಂದೇಶದಲ್ಲೆ ಬೆದರಿಕೆ ಹಾಕಲಾಗಿತ್ತು.ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿದರು. ಬಾಂಬ್ ನಿಷ್ಕ್ರಿಯ ತಂಡ, ಅಗ್ನಿಶಾಮಕ ಹಾಗೂ ಶ್ವಾನ ದಳಗಳು ಆಗಮಿಸಿ, ಪರಿಶೀಲನೆ ನಡೆಸಿದವು. ಶೋಧ ಕಾರ್ಯಾಚರಣೆ ವೇಳೆ ಯಾವುದೇ ಬಾಂಬ್, ಇತರ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪ್ರತ್ಯೇಕ ಸುದ್ದಿ: 'ನನ್ನ ವಿಚ್ಚೇದಿತ ಪತ್ನಿಗೆ ಮಾನಸಿಕ ಕಿರುಕುಳ ನೀಡಿದರೆ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುತ್ತೇನೆ' ಎಂದು ಬಿಎಂಆರ್‌ಸಿಎಲ್ ಅಧಿಕೃತ ಖಾತೆಗೆ ವ್ಯಕ್ತಿಯೊಬ್ಬ ಬೆದರಿಕೆ ಮೇಲ್ ರವಾನಿಸಿರುವ ಪ್ರಸಂಗ ಕಳೆದ ನವೆಂಬರ್ನಲ್ಲಿ ನಡೆದಿತ್ತು. rajivsettyptp@gmail.com ಹೆಸರಿನ ಖಾತೆಯಿಂದ ನವೆಂಬರ್ 13ರಂದು ರಾತ್ರಿ 11:25ಕ್ಕೆ ಮೇಲ್ ರವಾನಿಸಿರುವ ಆರೋಪಿಯು ಮೆಟ್ರೋ ನಿಲ್ದಾಣ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತು ಬಿಎಂಆರ್‌ಸಿಎಲ್ ಸಹಾಯಕ ನಿರ್ವಾಹಕ ಇಂಜಿನಿಯರ್ ನೀಡಿರುವ ದೂರಿನನ್ವಯ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿತ್ತು.ಇದನ್ನೂ ಓದಿ: ಬೆಂಗಳೂರು: ಗಿಳಿ ರಕ್ಷಿಸಲು ಹೋಗಿ ವಿದ್ಯುತ್ ಶಾಕ್ನಿಂದ ಯುವಕ ಸಾವು
Be the first to comment