ಉತ್ತರ ಕನ್ನಡದ ಜೊಯಿಡಾ ತಾಲ್ಲೂಕಿನ ಡಿಗ್ಗಿಯಲ್ಲಿ ಉಗಮವಾಗಿ ಕಾರವಾರದ ಸದಾಶಿವಗಡದಲ್ಲಿ ಕಾಳಿ ನದಿಯು ಅರಬ್ಬಿ ಸಮುದ್ರ ಸೇರುತ್ತದೆ. 184 ಕಿಲೋಮೀಟರ್ ಉದ್ದದ ತನ್ನ ದಾರಿಯುದ್ದಕ್ಕೂ ಹತ್ತಾರು ಯೋಜನೆಗಳ ಭಾರವನ್ನು ನದಿ ಹೊತ್ತಿದೆ. ಈಗ ಐದು ಜಿಲ್ಲೆಗಳಿಗೆ ನೀರು ಸಾಗಿಸುವ ಯೋಜನೆಯನ್ನು ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವುದು ನದಿಯ ಕಣಿವೆ ಭಾಗದ ಜನರನ್ನು ಕೆರಳಿಸಿದೆ. #kaliriver #dandeli #drinkingwater #prajavani #karwar #environment