Skip to playerSkip to main contentSkip to footer
  • 5 years ago
#rachitaram #dimplequeen #kalyaandhev

ಕೊರೊನಾ ಹಾವಳಿಯಿಂದಾಗಿ ಇಡೀ ದೇಶವೇ ತತ್ತರಿಸಿ ಹೋಗಿದೆ, ಹೀಗಿರುವಾಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ಚಿತ್ರರಂಗದ ಚಟುವಟಿಕೆಗಳು ನಿಂತುಹೋಗಿದ್ದವು, ಆದ್ರೆ ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಿನಿಮಾ ಚಿತ್ರೀಕರಣಗಳು ಮತ್ತೆ ಪ್ರಾರಂಭವಾಗಿದ್ದು, ಆಂಧ್ರದಲ್ಲಿ ಈಗಾಗಲೇ ಕೆಲವು ಚಿತ್ರಗಳ ಶೂಟಿಂಗ್ ಕೂಡ ಶುರುವಾಗಿಬಿಟ್ಟಿದೆ, ಹೀಗಿರುವಾಗ ಕೊರೊನಾ ಆತಂಕದ ನಡುವೆ ಈಗ ಸ್ಯಾಂಡಲ್‍ವುಡ್‍ನ ಡಿಂಪಲ್ ಕ್ವೀನ್ ರಚಿತಾ ರಾಮ್ ಕೂಡ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹೌದು ಮೊದಲ ಬಾರಿಗೆ ತೆಲುಗಿನಲ್ಲಿ ಅಭಿನಯಿಸುತ್ತಿರೋ ರಚಿತಾ ರಾಮ್, ಚಿರಂಜೀವಿ ಅಳಿಯ `ಕಲ್ಯಾಣ್ ದೇವ್' ಅಭಿನಯದ `ಸೂಪರ್ ಮಚ್ಚಿ' ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರೀಕರಣಕ್ಕಾಗಿ ಹೈದರಬಾದಿಗೆ ಹಾರಿರೋ ರಚಿತಾ ರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು,`ಎಲ್ಲಾ ಮುನ್ನೆಚ್ಚರಿಗಳನ್ನು ತೆಗೆದುಕೊಂಡು ಮತ್ತೆ ಚಿತ್ರೀಕರಣಕ್ಕೆ ಹಿಂತಿರುಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಸೂಪರ್ ಮಚ್ಚಿ ಚಿತ್ರದಲ್ಲಿ ಬ್ಯೂಸಿಯಾಗಿರೋ ರಚಿತಾ ರಾಮ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಏಕ್ ಲವ್ ಯಾ,100,ಡಾಲಿ,ಏಪ್ರಿಲ್,ಸೀರೆ,ಲಿಲ್ಲಿ ಸಿನಿಮಾಗಳು ಸೇರಿದಂತೆ ಇನ್ನು ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.

Category

😹
Fun

Recommended