Skip to playerSkip to main content
  • 7 years ago
ನಿನ್ನೆಯಷ್ಟೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಸೀಟು ಹಂಚಿಕೆಯನ್ನು ಮುಕ್ತಾಯಗೊಳಿಸಿಕೊಂಡಿವೆ. ಜೆಡಿಎಸ್‌ಗೆ 8 ಮತ್ತು ಕಾಂಗ್ರೆಸ್‌ 20 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. ಆದರೆ ಇದರಲ್ಲಿ ವಿಶೇಷವೆಂದರೆ ಜೆಡಿಎಸ್‌ ಪಕ್ಷವು ತುಮಕೂರು ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಕ್ಷೇತ್ರ ಹಂಚಿಕೆ ನಂತರ ದೇವೇಗೌಡರ ಲೆಕ್ಕಾಚಾರ ಬದಲಾಗಿದ್ದು, ದೇವೇಗೌಡ ಅವರು ಬೆಂಗಳೂರು ಉತ್ತರ ಕ್ಷೇತ್ರದ ಬದಲಿಗೆ ತುಮಕೂರು ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿಗಿದೆ. ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಹೋಲಿಸಿದರೆ ತುಮಕೂರು ಕ್ಷೇತ್ರವೇ ಗೌಡರಿಗೆ ಹೆಚ್ಚು ಸುರಕ್ಷಿತವಾಗಿರುವ ಕಾರಣ ಬೆಂಗಳೂರು ಉತ್ತರಕ್ಕೆ ಬದಲಿಗೆ ತುಮಕೂರಿನಿಂದ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

JDS president Deve Gowda may contest from Tumakuru instead of Bengaluru North. Deve Gowda thinking Tumakuru is more easier constituency than Bengaluru North.

Category

🗞
News
Be the first to comment
Add your comment

Recommended