4-11-2018: ಭಾನುವಾರದ ದಿನ ಭವಿಷ್ಯ | Boldsky

  • 6 years ago
ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅದೇನೋ ಒಂದು ಬಗೆಯ ನಿರಾಳ. ದಿನವಿಡೀ ವಿಶ್ರಾಂತಿ ಪಡೆಯಬಹುದು ಎನ್ನುವ ಖುಷಿ. ಉಳಿದ ದಿನಗಳಲ್ಲಿ ಮಾಡಲಾಗದೇ ಇಟ್ಟಿರುವ ಕೆಲಸಗಳನ್ನು ಪೂರ್ಣಗೊಳಿಸಲು ಇಂದು ಹಲವರಿಗೆ ಶುಭದಿನವಾಗಿ ಪರಿಣಮಿಸುತ್ತದೆ. ವಾರವಿಡೀ ಕೆಲಸದ ಒತ್ತಡದಲ್ಲಿ ಇರುವವರು ತಮ್ಮ ಕುಟುಂಬ ಹಾಗೂ ಸ್ನೇಹಿತರೊಡನೆ ಕೊಂಚ ಸಮಯವನ್ನು ಕಳೆಯಲು ಅವಕಾಶ ಕಲ್ಪಿಸಿಕೊಡುವ ಸುಂದರವಾದ ದಿನ ಇದು.
ಹಿಂದೂ ಪಂಚಾಗದ ಪ್ರಕಾರ ಭಾನುವಾರವನ್ನು ಶುಭದಿನವೆಂದು ಕರೆಯುತ್ತಾರೆ. ಕೆಲವು ಪ್ರಮುಖ ಕೆಲಸಗಳನ್ನು ಕೈಗೊಳ್ಳಲು ಈ ದಿನ ಶುಭಕರವಾದ್ದು ಎಂದು ಹೇಳುತ್ತಾರೆ. ಭಾನುವಾರ, ರವಿವಾರ, ಆದಿತ್ಯವಾರ ಎಂತಲೂ ಈ ದಿನವನ್ನು ಕರೆಯುತ್ತಾರೆ. ರವಿವಾರ ಎಂದು ಕರೆಯುವ ಈ ದಿನ ಎಲ್ಲರ ಬಾಳು ಬೆಳಗಲಿ ಎನ್ನುವುದುಬೋಲ್ಡ್ ಸ್ಕೈನ ಆಶಯ. ವಿಶ್ರಾಂತಿಗೆ ಅವಕಾಶ ಕಲ್ಪಿಸುವ ಈ ದಿನ ನಿಮ್ಮ ಭವಿಷ್ಯದಲ್ಲಿ ಯಾವೆಲ್ಲಾ ಬದಲಾವಣೆಗಳನ್ನು ನೀಡಬಹುದು ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ, ಈ ವಿಡಿಯೋ ನೋಡಿ

Recommended