Skip to playerSkip to main contentSkip to footer
  • 7 years ago
MLC election, JDS party youth leader H M Ramesh Gowda got the B Form: Is one of the strong ticket aspirant Y S V Datta again neglected by JDS supremo Deve Gowda?

ವಿಧಾನಪರಿಷತ್ ಚುನಾವಣೆಯಲ್ಲಿ ದತ್ತ ಅವರ ಹೆಸರು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿತ್ತು. ಇವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದ ಇನ್ನೊಂದು ಹೆಸರೆಂದರೆ ಎನ್ ಎಚ್ ಕೋನರೆಡ್ಡಿ. ಜೊತೆಗೆ, ಪಿಜಿಆರ್ ಸಿಂಧ್ಯಾ, ರಮೇಶ್ ಬಾಬು, ಬಿಬಿ ನಿಂಗಯ್ಯ, ಮಧು ಬಂಗಾರಪ್ಪ, ಆರ್ ಪ್ರಕಾಶ್, ಅಮರನಾಥ್ ಮತ್ತು ಪ್ರೊ. ರಂಗಪ್ಪ ಅವರ ಹೆಸರೂ ಕೇಳಿ ಬರುತ್ತಿತ್ತು. ಒಂದು ಹುದ್ದೆಗೆ ಇಷ್ಟೆಲ್ಲಾ ಹೆಸರು ಕೇಳಿ ಬರುತ್ತಿದ್ದರೂ, ಬಿಫಾರಂ ನಮಗೇ ಸಿಗುತ್ತೆ ಅನ್ನುವ ಅಚಲ ವಿಶ್ವಾಸದಲ್ಲಿದ್ದವರು, ದತ್ತ ಮತ್ತು ಕೋನ ರೆಡ್ಡಿ. ಆದರೆ, ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿ, ಜೆಡಿಎಸ್ ವರಿಷ್ಠ ದೇವೇಗೌಡರು ಬಿಫಾರಂ ನೀಡಿದ್ದು, ಪಕ್ಷದ ಯುವ ಘಟಕದ ರಮೇಶ್ ಗೌಡ ಅವರಿಗೆ.

Category

🗞
News

Recommended