ಯುವ ಪ್ರತಿಭೆ : ಮೇಘನಾ ಸುಧೀಂದ್ರ | Youth Karnataka : Multi faceted Meghana Sudhindra | Oneindia Kannada
  • 6 years ago
Meghana Sudhindra is multi faceted young writer and Kannada teacher to
non-Karnataka students. Daughter of famous scientist Haldodderi
Sudhindra, she has studied Masters of Science from UPF Barcelona. She
has been writing Kannada column in Oneindia Kannada in the name of
'Jayanagarada Hudugi'.


ಕರ್ನಾಟಕದಲ್ಲಿರುವ ಯುವ ಪ್ರತಿಭೆಗಳನ್ನು ಕನ್ನಡ ಜನತೆಗೆ ಪರಿಚಯಿಸುವ ಪ್ರಯೋಗವಿದು. ಇದರ
ಭಾಗವಾಗಿ, 'ಜಯನಗರದ ಹುಡುಗಿ' ಅಂಕಣಗಾರ್ತಿ ಮೇಘನಾ ಸುಧೀಂದ್ರ ಅವರ ಸಂದರ್ಶನ ಇಲ್ಲಿದೆ.
ಸ್ಪೇನ್ ದೇಶದ ಬಾರ್ಸಿಲೋನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ
ಪದವಿ ಪಡೆದಿರುವ ಮೇಘನಾ ಅವರು, ಬೆಂಗಳೂರಿನಲ್ಲಿ ಕನ್ನಡೇತರರಿಗೆ 'ಕನ್ನಡ ಗೊತ್ತಿಲ್ಲ'
ಸಂಸ್ಥೆಯ ಮೂಲಕ ಪ್ರತಿದಿನ ಕನ್ನಡ ಕಲಿಸುತ್ತಾರೆ.

ಉತ್ತಮ ಹಾಡುಗಾರ್ತಿಯೂ ಆಗಿರುವ ಮೇಘನಾ ಅವರು ಕರ್ನಾಟಕ ಸಂಗೀತದಲ್ಲಿ ಪರಿಣತಿ
ಪಡೆದಿದ್ದಾರೆ. ದೇಶ ಸುತ್ತ, ಕೋಶ ಓದು ಎನ್ನುವ ಗಾದೆಯಂತೆ, ಅವರು 23 ವಿದೇಶಗಳನ್ನು
ಸಂದರ್ಶಿಸಿದ್ದು, ಅವರ ತಾತ, ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದ ಹಿರಿಯ
ಪತ್ರಕರ್ತ ಎಚ್ ಆರ್ ನಾಗೇಶ್ ರಾವ್ ಅವರ ಪ್ರೇರಣೆಯಿಂದ ಕನ್ನಡ ಪುಸ್ತಕಗಳನ್ನು ಓದುವ
ಹುಚ್ಚನ್ನೂ ಹಚ್ಚಿಸಿಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಅಜ್ಜ ಮಾಡಿಟ್ಟ ಕನ್ನಡ ಪುಸ್ತಕಗಳ
ಭಂಡಾರವೇ ಇದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಜಯನಗರದ ಹುಡುಗಿಯಾಗಿ ಜಯನಗರದ ಬಗ್ಗೆ ಅವರ ಅನಿಸಿಕೆಗಳೇನು, ಅಲ್ಲಿ ಏನೇನು
ಸಮಸ್ಯೆಗಳಿವೆ, ಕರ್ನಾಟಕದ ಬಗ್ಗೆ ಅವರು ಕಂಡಿರುವ ಕನಸುಗಳೇನು ಮುಂತಾದ ವಿಷಯಗಳನ್ನು
ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮೇಘನಾ ಅವರಂಥ ಪ್ರತಿಭೆಗಳು ನಿಮಗೂ ಪರಿಚಯವಿದ್ದರೆ
ಒನ್ಇಂಡಿಯಾ ಕನ್ನಡಕ್ಕೆ ಪರಿಚಯಿಸಿ. ನಮ್ಮ ಮೂಲಕ ವಿಶ್ವ ಕನ್ನಡಿಗರಿಗೂ ಅವರ ಪರಿಚಯವಾಗಲಿ.
Recommended