ಬೆಂಗಳೂರಿನ ಜನತೆಗೆ ನಮ್ಮ ಮೆಟ್ರೋ ಕೊಟ್ಟಿದೆ ಒಂದು ಮುಖ್ಯ ಮಾಹಿತಿ | Oneindia Kannada

  • 6 years ago
ನಮ್ಮ ಮೆಟ್ರೋ ಹಳಿ ನಿರ್ವಹಣೆ ಕಾಮಗಾರಿಗಾಗಿ ಮಾ.10ರಂದು 45 ನಿಮಿಷ ಮುಂಚಿತವಾಗಿ ಸೇವೆ ಸ್ಥಗಿತಗೊಳ್ಳಲಿದೆ. ಮಾ.11ರಂದು ಎರಡೂವರೆ ಗಂಟೆ ತಡವಾಗಿ ಸೇವೆ ಆರಂಭವಾಗಲಿದೆ. ಇತ್ತೀಚೆಗೆ ಯಲಚೇನಹಳ್ಳಿ ನಿಲ್ದಾಣದ ಹಳಿ ಕ್ರಾಸ್ ಓವರ್ ಬಳಿ ಆತಂಕ ಸೃಷ್ಟಿಯಾಗಿತ್ತು. ಈ ಭಾಗದಲ್ಲಿ ಒಂದು ದಿನ ಮೆಟ್ರೋ ಸೇವೆ ಸ್ಥಗಿತಗೊಳಿಸಿ ಕ್ರಾಸ್ ಓವರ್ ಬದಲಿಸಲಾಗಿತ್ತು, ಬಿರುಕು ಕಾಣಿಸಿಕೊಂಡ ನಂತರ ಕೆಲ ದಿನಗಳವರೆಗೆ ಇಡೀ ಮಾರ್ಗದಲ್ಲಿ ಹಳಿಯನ್ನು ಪರಿಶೀಲಿಸಲಾಗಿದೆ. ಈಗ ಮತ್ತೊಮ್ಮೆ ಹಳಿಯ ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಕಾಮಗಾರಿ ನಡೆಸಲಾಗುತ್ತದೆ.

Due to track maintenance work BMRCL has made some changes in Metro service on March 10 and 11.

Recommended