ಎನ್ ಎ ಹ್ಯಾರಿಸ್ ಹಾಗು ಅವರ ಪುತ್ರನ ಬಗ್ಗೆ ಪ್ರಕಾಶ್ ರಾಯ್ ಕೊಟ್ಟ ಹೇಳಿಕೆಗೆ ಪಶ್ಚಾತಾಪ | Oneindia Kannada

  • 6 years ago
In a programme earlier Actor Prakash Rai alias Prakash Raj, appreciating Shanti Nagar MLA NA Harris and his son Bengaluru youth Congress General Secretary Mohammad Nalapad. Nalapad was expelled from the party for six years hours after he and 10 of his supporters were booked for the Saturday (Feb 17) night assault


ಬೆಂಗಳೂರು ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಕೇರಳ ಮೂಲದ ಎನ್ ಎ ಹ್ಯಾರೀಸ್ ಪುತ್ರ, ಬೆಂಗಳೂರು ನಗರ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಲಪಾಡ್ ನ ಗೂಂಡಾಗಿರಿ ಮತ್ತು ಪುಂಡಾಟಿಕೆ ಇಂದು ನಿನ್ನೆಯದಲ್ಲ. ಶಾಸಕನ ಪುತ್ರ ಎಂದೋ ಏನೋ, ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸರು ಸೈಲೆಂಟ್ ಆಗಿದ್ದರು ಎನ್ನುವ ಆಪಾದನೆಯಿತ್ತು. ನಲಪ್ಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕಾಗಿ ಯುಬಿಸಿಟಿಯ ಫರ್ಜ್ ಕೆಫೆಯಲ್ಲಿ ವಿದ್ವತ್ ಎನ್ನುವ ಯುವಕನ ಮೇಲೆ ಪ್ರಜ್ಞೆ ತಪ್ಪುವಂತೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದಾರೆ, ಅದರಲ್ಲಿ ಕೆಲವರನ್ನು ಭಾನುವಾರ (ಫೆ 18) ಪೊಲೀಸರು ಬಂಧಿಸಿದ್ದಾರೆ. ಕೆಪಿಸಿಸಿ ಈತನನ್ನು ಪಕ್ಷದಿಂದ ಉಚ್ಚಾಟಿಸಿದೆ, ಗೃಹಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾಗಿದೆ.

Recommended