ಕಾಂಗ್ರೆಸ್ ಸೇರುವ ಬಗ್ಗೆ ಕಂಪ್ಲಿ ಸುರೇಶ್ ಬಾಬು ಹೇಳಿದ್ದೇನು? | Oneindia Kannada

  • 6 years ago
ಬಳ್ಳಾರಿ, ಫೆಬ್ರವರಿ 6 : 'ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ನನ್ನ ಮನೆಯ ಬಾಗಿಲು ಗಟ್ಟಿಯಾಗಿದೆ, ನಾನೇಕೆ ಬೇರೆ ಪಕ್ಷದ ಬಾಗಿಲನ್ನು ತಟ್ಟಲಿ?' ಎಂದು ಕಂಪ್ಲಿ ಶಾಸಕ ಸುರೇಶ್ ಬಾಬು ಪ್ರಶ್ನಿಸಿದರು. ಬಳ್ಳಾರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಮುಂದಿನ ಚುನಾವಣೆಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದು ಖಚಿತ. ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್‍ಗೆ ಮುಖಂಡರ ಕೊರತೆ ಇದೆ. ಅದಕ್ಕೆ ಬೇರೆ ಪಕ್ಷದವರನ್ನು ಸೆಳೆಯುತ್ತಿದ್ದಾರೆ' ಎಂದು ದೂರಿದರು.

Recommended