Skip to playerSkip to main contentSkip to footer
  • 8 years ago
ಕೇಂದ್ರ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ವಿಚಾರ ಯಾಕೆ ಬಂತೋ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ 'ಚಾರ್ಲ್ಸ್ ಡಾರ್ವಿನ್ ಥಿಯರಿ', ಅಂದ್ರೆ ಮಂಗನಿಂದ ಮಾನವ ಎಂಬ ಸಂಗತಿಯೇ ಸುಳ್ಳು ಎಂಬ 'ಸತ್ಯ'ವನ್ನು ಕಂಡುಹಿಡಿದಿದ್ದಾರೆ ಸತ್ಯಪಾಲ್ ಸಿಂಗ್.

ಜಗತ್ತಿನ ಜೀವ ವಿಕಾಸದ ಬಗ್ಗೆ ಸಂಶೋಧನೆ ನಡೆಸಿದ್ದ ಇಂಗ್ಲೆಂಡ್ ನ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್ (ಫೆಬ್ರವರಿ 12 1809 — ಏಪ್ರಿಲ್ 19 1882) 'ಮಂಗನಿಂದ ಮಾನವ' ಎಂಬ ಸಿದ್ಧಾಂತ ಸುಳ್ಳು ಎಂದು ಸತ್ಯಪಾಲ್ ಸಿಂಗ್ ಅವರು ಪ್ರತಿಪಾದಿಸಿ ಜಗತ್ತಿನ ಸಮಸ್ತ ವಿಜ್ಞಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸತ್ಯಪಾಲ್ ಸಿಂಗ್ ಅವರು ಈ ರೀತಿ ಹೇಳಿಕೆ ನೀಡಲು ಅನಕ್ಷರಸ್ತರಲ್ಲ. ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ರಸಾಯನ ಶಾಸ್ತ್ರದಲ್ಲಿ ಎಂಫಿಲ್ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಒಳ್ಳೆಯ ಹೆಸರು ಪಡೆದಿದ್ದರು. ನಿವೃತ್ತಿಯ ನಂತರ ಉತ್ತರ ಪ್ರದೇಶದ ಬಾಘಪಟ್ ನಲ್ಲಿ ಲೋಕಸಭೆ ಚುನಾವಣೆಯಲ್ಲಿ ನಿಂತು ಗೆದ್ದವರು.

ಇಂಥ ವಿದ್ಯಾವಂತ ನಾಯಕರೊಬ್ಬರು ಹೀಗೇಕೆ ಹೇಳಿಕೆ ನೀಡಿದರು? ಅವರೇನಾದರೂ ಈ ವಿಷಯದಲ್ಲಿ ಸಂಶೋಧನೆ ಮಾಡಿದ್ದಾರಾ? ಮಾಡಿದ್ದರೆ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮಂಡನೆ ಮಾಡಬಹುದಿತ್ತಲ್ಲ? ಅಂತಾರಾಷ್ಟ್ರೀಯ ಖ್ಯಾತಿಯ ಮ್ಯಾಗಜೀನ್ ಗಳಲ್ಲಿ ತಮ್ಮ ಸಂಶೋಧನೆಯನ್ನು ಪ್ರಕಟಿಸಬಹುದಿತ್ತಲ್ಲ?

ಸತ್ಯಪಾಲ್ ಅವರ ವ್ಯಾಖ್ಯಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಮಂಗನಿಂದ ಮಾನವನೋ, ಮಾನವನಿಂದ ಮಂಗವೋ? ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಮಂಡಿಸಿ, ಚರ್ಚೆ ಮಾಡೋಣ.

Category

🗞
News

Recommended