Skip to playerSkip to main contentSkip to footer
  • 8 years ago
ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾಗಳನ್ನ ನೋಡಿರ್ತಾರ. ಆದ್ರೆ, ತಲೈವಾ ಮೈದಾನದಲ್ಲಿ ಬ್ಯಾಟ್-ಬಾಲ್ ಹಿಡಿದು ಆಟ ಆಡಿರೋದನ್ನ ಯಾವತ್ತು ನೋಡಿರಲ್ಲ ಅನ್ಸುತ್ತೆ. ಕ್ರಿಕೆಟ್ ಅಂದ್ರೆ ರಜನಿಕಾಂತ್ ಅವರಿಗೂ ತುಂಬ ಇಷ್ಟ. ಆಟದಲ್ಲಿ ರಜನಿಕಾಂತ್ ವೇಗದ ಬೌಲರ್ ಆಗಿದ್ದರು ಎನ್ನುವುದನ್ನ ಇತ್ತೀಚೆಗಷ್ಟೇ ತಲೈವಾ ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ, ತಾನೊಬ್ಬ ಅದ್ಭುತ ಫೀಲ್ಡರ್ ಕೂಡ ಆಗಿದ್ದರಂತೆ. ಮೂವರು ಆಟಗಾರರಂದ್ರೆ ಇಷ್ಟವಂತೆ. ರಜನಿ ಕ್ರಿಕೆಟ್ ನೋಡುವಾಗ ಮನ್ಸೂರ್ ಅಲಿ ಖಾನ್ ಪಟೌಡಿ ಫೆವರೇಟ್ ಆಗಿದ್ದರಂತೆ. ಈಗ ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಇಷ್ಟವಂತೆ. ಆದ್ರೆ, ಆಲ್ ಟೈಮ್ ಫೆವರೇಟ್ ಎಂದು ತೆಗೆದುಕೊಂಡರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ನೆಚ್ಚಿನ ಕ್ರಿಕೆಟಿಗ ಎಂದು ರಜನಿ ಬಹಿರಂಗಪಡಿಸಿದ್ದಾರೆ. ಸದ್ಯ, ರಜನಿಕಾಂತ್ ಅವರು '2.0' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಅದಾದ ನಂತರ 'ಕಾಲ ಕರಿಕಾಳನ್' ಚಿತ್ರ ರಿಲೀಸ್ ಆಗಲಿದೆ

Rajinikanth has recently spoke about his love for cricket and his old days of playing cricket .

Category

🗞
News

Recommended