Skip to playerSkip to main contentSkip to footer
  • 8 years ago
Bigg Boss Kannada 5: Week 12: Chandan Shetty's assumption over Jayasreenivasan and Sameer Acharya becomes true.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಕಳೆದ ವಾರ ಎಲ್ಲ ಸ್ಪರ್ಧಿಗಳ ತಲೆಗೂ 'ಬಿಗ್ ಬಾಸ್' ಬರೀ ಹುಳ ಅಲ್ಲ, ಹೆಬ್ಬಾವನ್ನೇ ಬಿಟ್ಟಿದ್ದರು. ಕನ್ಫೆಶನ್ ರೂಮ್ ನಿಂದ ಜಯಶ್ರೀನಿವಾಸನ್ ರನ್ನ ಮಾಯ ಮಾಡಿ, ಮಧ್ಯರಾತ್ರಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಿ, ಕೊನೆಗೆ ದಿವಾಕರ್ ಅವರನ್ನ ಎಲಿಮಿನೇಟ್ ಮಾಡಿ, ಸ್ಪರ್ಧಿಗಳಿಗೆ ಏನಾಗುತ್ತಿದೆ ಎಂಬುದನ್ನೇ ತಿಳಿಯದಂತೆ 'ಬಿಗ್ ಬಾಸ್' ಚಮಕ್ ಮೇಲೆ ಚಮಕ್ ಕೊಟ್ಟಿದ್ದರು.ಇಷ್ಟೆಲ್ಲ ಆದರೂ, ಚಂದನ್ ಶೆಟ್ಟಿಗೆ ಮಾತ್ರ ಯಾವುದೇ ಗೊಂದಲ ಇಲ್ಲ. ''ಸಮೀರಾಚಾರ್ಯ ಹಾಗೂ ಜಯಶ್ರೀನಿವಾಸನ್ ಒಟ್ಟಿಗೆ ಸೀಕ್ರೆಟ್ ರೂಮ್ ನಲ್ಲಿ ಇದ್ದರು. ಸಮೀರಾಚಾರ್ಯ ಸೇಫ್ ಆಗಿ ಒಳಗೆ ಬಂದರು, ಜಯಶ್ರೀನಿವಾಸನ್ ಅಲ್ಲಿಂದಲೇ ಔಟ್ ಆಗಿದ್ದಾರೆ'' ಎಂದು ಕಣ್ಣಾರೆ ನೋಡಿದ ಹಾಗೆ ಚಂದನ್ ಶೆಟ್ಟಿ ಊಹಿಸಿದ್ದಾರೆ. ''ಕಳೆದ ವಾರ ಡಬಲ್ ಎಲಿಮಿನೇಷನ್ ನಡೆದಿತ್ತು. ಸೋಮವಾರ ಜಯಶ್ರೀನಿವಾಸನ್ ಔಟ್ ಆಗಿಲ್ಲ. ಸಮೀರಾಚಾರ್ಯ ಯಾವತ್ತು ವಾಪಸ್ ಬಂದ್ರೋ, ಅವತ್ತೇ ಜಯಶ್ರೀನಿವಾಸನ್ ಔಟ್ ಆದರು.

Category

🗞
News

Recommended