2ಜಿ ಸ್ಪೆಕ್ಟ್ರಮ್ ಹಗರಣದ ತೀರ್ಪು : ಎ ರಾಜಾಗೆ ಸಿಕ್ಕಿದ್ದು ಬರೀ 3 ಸಾವಿರ ಕೋಟಿ | Oneindia Kannada

  • 6 years ago
The CBI and Enforcement Directorate investigations have estimated Rs 30,000 crore scam in 2G spectrum allocation and former telecom minister A Raja could have got bribes to the tune of Rs 3,000 crore.

ಬಹುದೊಡ್ಡ ಹಗರಣ ಎಂದೇ ಕುಖ್ಯಾತಿ ಗಳಿಸಿರುವ 2ಜಿ ತರಂಗ ಗುಚ್ಛ ಹಂಚಿಕೆ ಅವ್ಯವಹಾರದಿಂದ 1.76 ಲಕ್ಷ ಕೋಟಿ ನಷ್ಟ(CAG ವರದಿಯಂತೆ) ಎಂಬ ಮೊತ್ತ ಕೇಳಿ ಎಲ್ಲರೂ ಹುಬ್ಬೇರಿಸಿದ್ದರು. ಆದರೆ, ಜಾರಿ ನಿರ್ದೇಶನಾಲಯದ ನಂತರ ಎರಡು ಕೇಸುಗಳನ್ನು ಕೈಗೆತ್ತಿಕೊಂಡ ಸಿಬಿಐ ತಂಡ ನೀಡಿದ ಮೊತ್ತ 30 ಸಾವಿರ ಕೋಟಿ ರು ಮಾತ್ರ.ಈ ಎಲ್ಲಾ ಕಳ್ಳ ವ್ಯವಹಾರಗಳ ಸೂತ್ರಧಾರ ಕೇಂದ್ರದ ಮಾಜಿ ಸಚಿವ ಎ ರಾಜಾ ಅವರು ತಮ್ಮ ಜೇಬಿಗೆ ಎಷ್ಟು ಇಳಿಸಿಕೊಂಡರು. ಯಾವ ಯಾವ ಕಂಪನಿಗಳಿಗೆ ಲಾಭವಾಯಿತು ಎಂಬ ಕುತೂಹಲ ಇನ್ನೂ ಹಾಗೆ ಇದೆ.ಸುಮಾರು 200 ಕೋಟಿ ರು ಹವಾಲಾ ಹಣವನ್ನು ಲಂಚ ರೂಪದಲ್ಲಿ ಬಳಸಲಾಗಿದೆ ಎಂದು ಮಾಜಿ ಟೆಲಿಕಾಂ ಸಚಿವ ಎ.ರಾಜಾ ಮತ್ತು ಕನ್ನಿಮೋಳಿ ಅವರ ವಿರುದ್ಧ ಸಿಬಿಐ 2015ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Recommended