ಕರಾವಳಿ ಭಾಗದಲ್ಲಿ ಕೋಮು ದಳ್ಳುರಿ ಹೊತ್ತಿ ಉರಿಯುತ್ತಿದೆ | Oneindia Kannada

  • 6 years ago
While Coastal Karnataka is heated up with Communal Dispute, On 12th in Yadgir Srirama Sena district unit Virat Hindu conference was arranged. Telangana BJP Leader Goshamahal & BJP MLA Rajasingh Thakur makes a provocative speech.


ಕರಾವಳಿ ಭಾಗ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿರುವಾಗಲೆ ಯಾದಗಿರಿಯಲ್ಲಿ ಇದೆ 12 ರಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ವಿರಾಟ್ ಹಿಂದು ಸಮಾವೇಶದಲ್ಲಿ ತೆಲಾಂಗಣದ ಗೋಶಾಮಹಲ್ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರು ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.ಭದ್ರತೆಗೆ ಬಂದ ಪೊಲೀಸರು ಮೂಕ ಸಾಕ್ಷಿಯಾಗಿದ್ದರು.ಪ್ರತಿಯೊಬ್ಬ ಹಿಂದುಗಳು ಮನೆಯಲ್ಲಿ ಖಡ್ಗ ,ಲಾಠಿ ಇಟ್ಟುಕೊಳ್ಳಬೇಕು ಧರ್ಮವಿರೋಧಿಗಳಿಗೆ ಇದರಿಂದ ತಕ್ಕ ಪಾಠ ಕಲಿಸಲು ಸಹಾಯಕವಾಗುತ್ತದೆ. ಹಿಂದು ಯುವಕರು ಲಾಠಿ,ಖಡ್ಗ ತರಬೇತಿ ಪಡೆದುಕೊಳ್ಳಬೇಕು ಮನೆಯಲ್ಲಿ ಶಸ್ತ್ರಾಸ್ತ್ರಗಳು ಇಟ್ಟುಕೊಳ್ಳದಿದ್ದರೆ ಹಿಂದು ರಾಷ್ಟ್ರ ದೇಶ,ಅಖಂಡ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಶಸ್ತ್ರಾಸ್ತ್ರಗಳನ್ನು ಹಿಂದುಗಳು ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ನಾವು ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ.ಈಗಾಗಲೇ ರಾಜ್ಯದಲ್ಲಿ ಹಿಂದುಗಳ ಹತ್ಯೆ ನಡೆಯುತ್ತಿದೆ ಎಂದು ಪ್ರಚೋದನೆ ಭಾಷಣ ಮಾಡಿದರು.ಯಾದಗಿರಿ ನಗರದ ವನಕೇರಿ ಲೇಔಟ್ ನಲ್ಲಿ ಇದೆ 12 ರಂದು ಶ್ರೀರಾಮ ಸೇನೆ ಜಿಲ್ಲಾ ಘಟಕ ವಿರಾಟ್ ಹಿಂದು ಸಮಾವೇಶ ಹಮ್ಮಿಕೊಂಡಿದ್ದ ವೇಳೆ ರಾಜಾ ಸಿಂಗ್ ಮಾತನಾಡಿದರು.ಈ ವೇಳೆ ವೇದಿಕೆ ಮೇಲೆ ಖಡ್ಗ ಪ್ರದರ್ಶನ ಮಾಡಿದರು.

Recommended