ಖಾಸಗಿ ಸುದ್ದಿ ವಾಹಿನಿಯ ನಿರೂಪಕನಿಂದ ಹಣಕ್ಕಾಗಿ ಬೆದರಿಕೆ | ಎಚ್ ಡಿ ಕೆ ಆರೋಪ | Oneindia Kannada

  • 6 years ago
H D Kumaraswamy alleges that, a Private News Channel Presenter threats for Money. Kumaraswamy says that, he has the audio clip of the conversation made by Anchor. Watch Video to Know More.

ಇಲ್ಲಿದೆ ಒಂದು ಸ್ಫೋಟಕ ಮಾಹಿತಿ. ಒಂದು ಖಾಸಗಿ ಸುದ್ದಿವಾಹಿನಿಯಿಂದ ಹಣಕ್ಕಾಗಿ ಬೆದರಿಕೆಯೊಡ್ಡಲಾಗಿದೆ. ಇದರ ಬಗ್ಗೆ ಎಚ್ ಡಿ ಕುಮಾರಸ್ವಾಮಿಯವರಿಂದ ಆರೋಪ ಕೇಳಿ ಬಂದಿದೆ. ಜೊತೆಗೆ ಆ ನಿರೂಪಕ ಮಾತನಾಡಿರುವ ಆಡಿಯೋ ಕ್ಲಿಪ್ ಕೂಡ ನನ್ನ ಬಳಿ ಇದೆ ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ. ಎಚ್ ಡಿ ಕುಮಾರಸ್ವಾಮಿಯವರು ಆ ನಿರೂಪಕನ ವಿರುದ್ಧ ಸಿಡೆದ್ದಿದ್ದಾರೆ. ಮಾಧ್ಯಮದಲ್ಲಿ ಇರುವವರು ಜವಾಬ್ದಾರಿಯಿಂದ ವರ್ತಿಸಬೇಕು. ಹೀಗೆ ಹುಡುಗಾಟಿಕೆ ಮಾಡಬಾರದು ಎಂದು ಕುಮಾರಸ್ವಾಮಿಯವರು ಕೆಂಡ ಕಾರಿದ್ದಾರೆ. ತಮ್ಮ ಪಕ್ಷದ ಸಚಿವರೊಬ್ಬರಿಗೆ ಹೀಗೆ ಹಣಕ್ಕಾಗಿ ಬೆದರಿಕೆಯೊಡ್ಡಿರುವುದು ಸರಿಯಿಲ್ಲ. ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿಯವರು ಹೇಳ್ತಾರೆ. ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ ದುಡ್ಡು ಕೊಡಬೇಕು ಕೊಡಲಿಲ್ಲ ಅಂದ್ರೆ ಅದು ಹೇಗೆ ಗೆಲ್ಲುತ್ತೀರಾ ನೋಡೋಣ ಎಂದು ಆ ನಿರೂಪಕ ಬೆದರಿಕೆ ಹಾಕಿದ್ದನಂತೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Recommended