ಮೊಟ್ಟ ಮೊದಲ ಬಾರಿಗೆ 'ಬಿಗ್' ಮನೆಯೊಳಗೆ ಕಣ್ಣೀರಿಟ್ಟ ದಿವಾಕರ್ | FIlmibeat Kannada

  • 6 years ago
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಅದಾಗಲೇ 59 ದಿನಗಳು ಕಳೆದು ಹೋಗಿವೆ. ಈ 59 ದಿನಗಳಲ್ಲಿ ಅದೆಷ್ಟೋ ಬಾರಿ ದಿವಾಕರ್ ಕಿತ್ತಾಡಿಕೊಂಡಿದ್ದಾರೆ, ಗಲಾಟೆ ಮಾಡಿಕೊಂಡಿದ್ದಾರೆ. ಆದ್ರೆ, ಎಂದೂ ಬೇಜಾರು ಮಾಡಿಕೊಂಡು ಕಣ್ಣೀರು ಹಾಕಿಲ್ಲ. ಆದ್ರೆ, ಮೊನ್ನೆ ಮಾತ್ರ ದಿವಾಕರ್ ಭಾವುಕರಾಗಿದ್ದರು. ಅದಕ್ಕೆ ಕಾರಣ ಪತ್ನಿ ಮಮತಾ. ಪತ್ನಿ ಮಮತಾ ರವರ ನೆನಪಿನಲ್ಲಿ ಇದ್ದ ದಿವಾಕರ್, ಪತ್ನಿ ಧ್ವನಿಯನ್ನ ಕೇಳಬೇಕು ಅಂತ 'ಬಿಗ್ ಬಾಸ್' ಬಳಿ ಕೇಳುತ್ತಾ ಕಣ್ಣೀರಿಟ್ಟರು.''ನಾನು ಯಾರ ಬಳಿಯೂ ಜಗಳ ಮಾಡಲ್ಲ. ಬೇಕು ಬೇಕು ಅಂತ ಏನೂ ಮಾತನಾಡಲ್ಲ. ಪ್ಲೀಸ್, ಪತ್ನಿ ಧ್ವನಿ ಹಾಕಿಸಿ'' ಅಂತ 'ಬಿಗ್ ಬಾಸ್' ಬಳಿ ದಿವಾಕರ್ ಬೇಡಿಕೊಂಡರು.ಈಗಾಗಲೇ, ಕೃಷಿ ತಾಪಂಡ ಸಹೋದರ, ಜೆಕೆ ತಾಯಿ, ಜಗನ್ ಅಮ್ಮ ಸೇರಿದಂತೆ ಸ್ಪರ್ಧಿಗಳ ಕುಟುಂಬದವರ ಸಂದೇಶವನ್ನು ಸಂಗ್ರಹಿಸಿ 'ಬಿಗ್ ಬಾಸ್' ಮನೆಯೊಳಗೆ ಪ್ಲೇ ಮಾಡಲಾಗಿದೆ. ಆದ್ರೆ, ದಿವಾಕರ್ ಕುಟುಂಬದಿಂದ ಇನ್ನೂ ಯಾರೂ ಮಾತನಾಡಿಲ್ಲ. ಪತ್ನಿ ಧ್ವನಿ ಕೇಳಬೇಕು ಎಂದು ದಿವಾಕರ್ ಹಾತೊರೆಯುತ್ತಿದ್ದಾರೆ. ದಿವಾಕರ್ ಕೋರಿಕೆಗೆ 'ಬಿಗ್ ಬಾಸ್' ಯಾವಾಗ ಅಸ್ತು ಎನ್ನುತ್ತಾರೋ.?


Bigg Boss Kannada 5: Week 8: big boss is one of the big reality show in colors kannada and there for the first time Diwakar becomes emotional, diwakar is missing his wife

Recommended