Skip to playerSkip to main contentSkip to footer
  • 12/8/2017
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 51ನೇ ದಿನ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದ ನಟಿ ವೈಷ್ಣವಿ ಸದ್ಯದಲ್ಲೇ ಔಟ್ ಆದರೆ ಅಚ್ಚರಿ ಇಲ್ಲ. ಇದೇನಪ್ಪಾ, ಮೊನ್ನೆಮೊನ್ನೆಯಷ್ಟೇ ವೈಷ್ಣವಿ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ 'ಬಿಗ್ ಬಾಸ್' ಮನೆಯೊಳಗೆ ಪದಾರ್ಪಣೆ ಮಾಡಿದ್ರು. ಅಷ್ಟು ಬೇಗ ಅದ್ಹೇಗೆ ಔಟ್ ಆಗ್ತಾರೆ ಅಂತ ಯೋಚನೆ ಮಾಡ್ತಿದ್ದೀರಾ.? ನಟಿ ವೈಷ್ಣವಿ ಬೆನ್ನಿಗೆ ಪೆಟ್ಟು ಬಿದ್ದಿದೆ. 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ವೈಷ್ಣವಿಗೆ ಪೆಟ್ಟಾಗಿದೆ. ಇಪ್ಪತ್ನಾಲ್ಕು ಗಂಟೆಗಳಲ್ಲಿ ವೈಷ್ಣವಿಗೆ ಬೆನ್ನು ನೋವು ಕಮ್ಮಿ ಆಗದೇ ಇದ್ದರೆ, ಬೇರೆ ದಾರಿಯಿಲ್ಲದೆ 'ಬಿಗ್ ಬಾಸ್' ಮನೆಯಿಂದ ವೈಷ್ಣವಿ ಆಚೆ ಬರಲೇಬೇಕು.! 'ಬಿಗ್ ಬಾಸ್' ಮನೆಯೊಳಗೆ 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದ ಸಂದರ್ಭದಲ್ಲಿ ಪ್ರಾಣಿಗಳನ್ನು ಸೆರೆಹಿಡಿಯುವಾಗ ನಟಿ ವೈಷ್ಣವಿ ಬೆನ್ನಿಗೆ ಪೆಟ್ಟು ಬಿತ್ತು.ಸುಸ್ತಾದ ವೈಷ್ಣವಿ ತಲೆ ತಿರುಗಿ ಬಿದ್ದರು. ಬೆನ್ನು ನೋವಿನಿಂದ ಬಳಲುತ್ತಿದ್ದ ವೈಷ್ಣವಿಗೆ 'ಬಿಗ್ ಬಾಸ್' ಮನೆಯಲ್ಲಿ ತುರ್ತು ಚಿಕಿತ್ಸೆ ಲಭಿಸಿತು.

Category

🗞
News