'ಬಿಗ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಇವರೇ | Filmibeat Kannada

  • 7 years ago
'ಬಿಗ್ ಬಾಸ್' ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರು ಯಾರು.?'' - ಈ ಪ್ರಶ್ನೆ ಕೇಳಿದ ಕೂಡಲೆ ನಿಮ್ಮ ತಲೆಯಲ್ಲಿ ಹಲವು ಸ್ಪರ್ಧಿಗಳ ಹೆಸರು ಬರಬಹುದು. ಆದ್ರೆ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರಿಗೆ ಮಾತ್ರ 'ಸಮೀರಾಚಾರ್ಯ ಅವರಿಗೆ ಯೋಗ್ಯತೆ ಇಲ್ಲ' ಎಂದೆನಿಸಿದೆ. ಹಾಗಂತ ಸ್ವತಃ ಜಯಶ್ರೀನಿವಾಸನ್ ಬಹಿರಂಗವಾಗಿ ಹೇಳಿದ್ದಾರೆ. ಅಷ್ಟಕ್ಕೂ, ಜಯಶ್ರೀನಿವಾಸನ್ ಇದನ್ನೆಲ್ಲ ಹೇಳಿದ್ದು 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ. ಇದೇನಪ್ಪಾ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ಮುಗಿದು ಹೋಯ್ತಲ್ಲ ಅಂತ ಕನ್ ಫ್ಯೂಸ್ ಆಗಬೇಡಿ.'ಬಿಗ್ ಬಾಸ್' ಮನೆಯಲ್ಲಿಯೇ 'ಬಿಗ್ ಬಾಸ್' ಮನೆಯ ಸದಸ್ಯರಿಗಾಗಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮ ನಿನ್ನೆ ನಡೆಯಿತು. 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಅಕುಲ್ ಬಾಲಾಜಿ ಆಗಮಿಸಿ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.'ಬಿಗ್ ಬಾಸ್' ಮನೆಗೆ ಅಕುಲ್ ಬಾಲಾಜಿ ಸ್ಪೆಷಲ್ ಗೆಸ್ಟ್ ಆಗಿ ಆಗಮಿಸಿದ್ದರು. 'ಅಕುಲ್ ಕಮಾಲ್' ಎಂಬ ವಿಶೇಷ ಚಟುವಟಿಕೆ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ರೀತಿ 'ದಿಢೀರ್ ಬೆಂಕಿ' ಸುತ್ತು ನಡೆಯಿತು. ಮನೆಯ ಎಲ್ಲ ಸದಸ್ಯರು ಇದರಲ್ಲಿ ಪಾಲ್ಗೊಂಡು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.


Bigg Boss Kannada 5: Week 8: big boss is one of the big reality show in colors kannada and nowakul balaji has given entry to bigg boss house.

Recommended