ಕ್ಷೇತ್ರದ ಬದಲಾವಣೆ ಬಗ್ಗೆ ಖಚಿತ ಪಡಿಸಿದ ಸಿದ್ದರಾಮಯ್ಯ | Oneindia Kannada

  • 6 years ago
ಚಿಕ್ಕಮಗಳೂರು, ಡಿಸೆಂಬರ್ 01 : 'ಕ್ಷೇತ್ರದ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರದಲ್ಲಿ ಗುರುವಾರ ಮಾತನಾಡಿದ ಸಿದ್ದರಾಮಯ್ಯ ಅವರು, 'ಕ್ಷೇತ್ರದ ಆಯ್ಕೆಯಲ್ಲಿ ಯಾವುದೇ ಗೊಂದಲವಿಲ್ಲ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ' ಎಂದು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಸಚಿವಾಲಯದ ಇಬ್ಬರು ಚುನಾವಣಾ ಕಣಕ್ಕೆ? 'ನಾನು ಯಾವುದೇ ಸಮಾವೇಶ, ಯಾತ್ರೆಗಳನ್ನು ಮಾಡುತ್ತಿಲ್ಲ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದೇನೆ, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಿದ್ದೇನೆ' ಎಂದು ತಿಳಿಸಿದರು.'ಪಕ್ಷದ ವತಿಯಿಂದ ಸಭೆ, ಸಮಾವೇಶ ನಡೆಯುತ್ತಿದೆ. ಪರಮೇಶ್ವರ, ದಿನೇಶ್ ಗುಂಡೂರಾವ್, ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ಇದೆಲ್ಲ ಮಾಡುತ್ತಿದ್ದೇವೆ' ಎಂದು ಹೇಳಿದರು.ವಿದ್ಯುತ್ ಖರೀದಿ ಹಗರಣದ ಸದನ ಸಮಿತಿಯ ವರದಿಯಲ್ಲಿ ಯಾವುದೇ ದ್ವೇಷದ ರಾಜಕಾರಣವಿಲ್ಲ. ಹೆಚ್ಚು ಹಣ ಕೊಟ್ಟು ವಿದ್ಯುತ್ ಖರೀದಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ನೇಮಕ ಮಾಡಲಾಗಿತ್ತು. ಅದು ಈಗ ವರದಿ ಕೊಟ್ಟಿದೆ' ಎಂದರು.

Karnataka Chief Minister Siddaramaiah said, There is no confusion in constituency selection for Karnataka assembly elections 2018. I will contest form Chamundeshwari constituency, Mysuru...watch this video

Recommended