'ನಮ್ಮ ಟೈಗರ್' ಕ್ಯಾಬ್ ಡ್ರೈವರ್ ಮನದಾಳದ ಮಾತು | Oneindia Kannada

  • 7 years ago
ಮೊಬೈಲ್ ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುತ್ತಿರುವ ಓಲಾ ಹಾಗೂ ಊಬರ್ ಸಂಸ್ಥೆಗಳಿಗೆ ಸೆಡ್ಡು ಹೊಡೆದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಚಾಲಕರೇ ಆರಂಭಿಸಿರುವ 'ನಮ್ಮ ಟೈಗರ್' ಕ್ಯಾಬ್ ಸೇವೆ ಇಂದು (ಬುಧವಾರ) ಲೋಕಾರ್ಪಣೆಗೊಂಡಿದೆ. ಬೆಂಗಳೂರಿನ ಪುಟ್ಟಣಶೆಟ್ಟಿ ಪುರಭವನ (ಟೌನ್ ಹಾಲ್)ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್. ಡಿ ದೇವೇಗೌಡ ಅವರು 'ನಮ್ಮ ಟೈಗರ್' ಕ್ಯಾಬ್ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ದುಡಿಯುವ ಕೈಗಳಿಗೆ ಸಹಾಯ ಮಾಡಿದ ಎಲ್ಲಾ ಯುವಕರಿಗೆ, ಈ ಕ್ಯಾಬ್ ಅನ್ನು ಹೊರತರಲು ಸಾಕಷ್ಟು ಶ್ರಮಿಸಿದವರಿಗೆ ಒಳ್ಳೆಯದು ಆಗಲಿ, 'ನಮ್ಮ ಟೈಗರ್ ಕ್ಯಾಬ್' ಯಶಸ್ಸು ಕಾಣಲಿ ಹಾರೈಸಿದರು. ನಮ್ಮ ಟೈಗರ್ ಸೇವೆ ದಿನದ 24 ಗಂಟೆಯೂ ಸಾಮಾನ್ಯ ದರದಲ್ಲಿ ಸೇವೆ ಒದಗಿಸಲಿದೆ. ಕೊನೆ ನಿಮಿಷದ ವರೆಗೆ ಯಾವುದೇ ಚಾರ್ಚ್ ಇಲ್ಲದೇ, ಏಕಾಏಕಿ ದರ ವಿಧಿಸದೆ ಉತ್ತಮ ಸೇವೆ ನೀಡಲಿದೆ.

'Namma Tygr' new cab facility awaits people of Bengaluru and the grand launch of the service was witnessed by many

Recommended