ಕನ್ನಡ ಮಾಧ್ಯಮ ಜಗತ್ತಿನ ಸುತ್ತ ಒಂದು ನೋಟ | ಬಾರ್ಕ್ ರಿಪೋರ್ಟ್ ಇಲ್ಲಿದೆ | Oneindia Kannada

  • 7 years ago
Kannada electronic media is abuzz with many developments. BARC rating report for 11th November 2017 to Friday, 17th November 2017 Week is out Bigg Boss Kannada 5 failed to appear this also and many more news from across the media houses in Karnataka.


ಟಿಆರ್ ಪಿ ವಾರ್ ನಲ್ಲಿ ಮಕಾಡೆ ಮಲಗಿದ ಬಿಗ್ ಬಾಸ್ ಕನ್ನಡ 5. ಕನ್ನಡ ಮಾಧ್ಯಮ ಜಗತ್ತಿನ ಇತ್ತೀಚಿನ ಆಗು ಹೋಗುಗಳತ್ತ ಈ ವಾರದ ವಾರೆ ನೋಟ ಇಲ್ಲಿದೆ.ಈ ವಾರವೂ ಮೇಲಕ್ಕೇರದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಎಂದು BARC ರಿಪೋರ್ಟ್ ಹೇಳುತ್ತಿದೆ. ನಾಳೆಯಿಂದ ಫ್ಯಾಮಿಲಿ ಶೋ ನಿರೂಪಕರಾಗಿ ಮತ್ತೊಮ್ಮೆ ಕಿರುತೆರೆಯಲ್ಲಿ ಮೋಡಿ ಮಾಡಲು ಪುನೀತ್ ಎಂಟ್ರಿ ಕೊಡುತ್ತಿದ್ದಾರೆ.ಸುದ್ದಿ ವಾಹಿನಿಗಳಿಂದ ವಲಸೆ ನಡೆಯುತ್ತಿರುವ ಬೆನ್ನಲ್ಲೇ ಫಿಕ್ಷನ್ ಟೀಮ್ ಗಳ ಪುನರ್ ರಚನೆಯಾಗುತ್ತಿದೆ. ಧಾರಾವಾಹಿಗಳ ಭರಾಟೆಯ ನಡುವೆ ರಿಯಾಲಿಟಿ ಶೋ, ಟಾಕ್ ಶೋ, ಗೇಮ್ ಶೋಗಳು ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಸುವರ್ಣ, ಜೀ, ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ಗಳ ಉದಯ ಟಿವಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ.ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿ ಜನಪ್ರಿಯತೆ ಕುಗ್ಗುತ್ತಿದೆಯೇ? ಹೀಗೊಂದು ಪ್ರಶ್ನೆ ಮೊದಲ ವಾರದ ಕೊನೆಗೆ ಮೂಡಿದ್ದು ಸುಳ್ಳಲ್ಲ. ವೀಕೆಂಡ್ ನಲ್ಲಿ ಸುದೀಪ್ ನಿರೂಪಣೆ ಬಗ್ಗೆ, ಕಿಚನ್ ಕಮಾಲ್ ಬಗ್ಗೆ ಕೆಮ್ಮಂಗಿಲ್ಲ. ಆದರೆ, ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸಲು ವಿಫಲರಾದ ಸ್ಪರ್ಧಿಗಳು, ಅದೇ ಹಳೆ ಫಾರ್ಮ್ಯೂಲಾ, ಟಾಸ್ಕ್ ಗಳು, ಗಿಮಿಕ್ ಗಳು ಹೊಸ ಪ್ರೇಕ್ಷಕರನ್ನು ಹುಟ್ಟುಹಾಕುವಲ್ಲಿ ವಿಫಲರಾಗಿರುವುದರಿಂದ ಟಿ ಆರ್ ಪಿ ಮೇಲಕ್ಕೇರಿಲ್ಲ.

Recommended