ಕಾಂಗ್ರೆಸ್ ಮುಖಂಡ ಪ್ರಿಯ ರಂಜನ್ ದಾಸ್ ಮುನ್ಷಿ 20-11-2017ರಂದು ನಿಧನ | Oneindia Kannada

  • 7 years ago
Senior Congress leader Priya Ranjan Dasmunsi, who was in coma since 2008, today passed away at a hospital here. He was 72 years old.

ಕಾಂಗ್ರೆಸ್ ಮುಖಂಡ ಪ್ರಿಯರಂಜನ್ ದಾಸ್ ಮುನ್ಷಿ ಇನ್ನಿಲ್ಲ. ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪ್ರಿಯರಂಜನ್ ದಾಸ್ ಮುನ್ಷಿ ಅವರು ಸೋಮವಾರದಂದು ನಿಧನರಾಗಿದ್ದಾರೆ. 2008ರಿಂದ ಅವರು ಕೋಮಾವಸ್ಥೆಯಲ್ಲಿದ್ದರು.
72 ವರ್ಷ ವಯಸ್ಸಿನ ಪ್ರಿಯರಂಜನ್ ದಾಸ್ ಅವರು 2008ರಲ್ಲಿ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಡ ಹೃತ್ಕುಕ್ಷಿ ಸಂಪೂರ್ಣವಾಗಿ ವಿಫಲಾಗಿದ್ದು, ಕೋಮಾಕ್ಕೆ ಜಾರಿದ್ದಾರೆ ಎಂದು ಏಮ್ಸ್ ವೈದ್ಯ ವೈ.ಕೆ ಗುಪ್ತ ಅವರು ಪ್ರಕಟಿಸಿದ್ದರು.ಕಳೆದ ಒಂದು ತಿಂಗಳಿನಿಂದ ಮುನ್ಷಿ ಅವರ ದೇಹಾರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದಿತ್ತು, ಸೋಮವಾರ ಮಧ್ಯಾಹ್ನ 12.10ರ ವೇಳೆಗೆ ಕೊನೆಯುಸಿರೆಳೆದರು ಎಂದು ಅಪೋಲೋ ಆಸ್ಪತ್ರೆ ವಕ್ತಾರರು ಪ್ರಕಟಿಸಿದ್ದಾರೆ. ಮೃತರು ಪತ್ನಿ ದೀಪಾ ದಾಸ್ ಮುನ್ಷಿ ಹಾಗೂ ಪುತ್ರ ಪ್ರಿಯದೀಪ್ ಮುನ್ಷಿ ಅವರನ್ನು ಅಗಲಿದ್ದಾರೆ.

Recommended