ಇಂದಿರಾ ಗಾಂಧಿಯವರ ಬಗ್ಗೆ ಟ್ವೀಟ್ ಮಾಡಿದ ಸಿದ್ದರಾಮಯ್ಯ | ಕಾಲೆಳೆದ ಟ್ವಿಟ್ಟಿಗರು | Oneindia Kannada

  • 7 years ago
Former Indian Prime Minister Indira Gandhi is a 'Iron Lady', Karnataka CM Siddaramaiah tweet. Tweeters reply for CM twitter post.


ಉಕ್ಕಿನಮಹಿಳೆ 'ಇಂದಿರಾ' ಎಂದು ನೆನಪಿಸಿಕೊಂಡ ಸಿಎಂಗೆ ಟ್ವಿಟ್ಟಿಗರು ಏನಂದ್ರು? ದೇಶದ ಇದುವರೆಗಿನ ಏಕೈಕ ಮಹಿಳಾ ಪ್ರಧಾನಿ ಇಂದಿರಾ ಪ್ರಿಯದರ್ಶಿನಿ ಗಾಂಧಿಯವರ ನೂರನೇ ಜನ್ಮದಿನಾಚರಣೆಯನ್ನು ಭಾನುವಾರ (ನ 19) ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕರ್ನಾಟಕ ಸರಕಾರ ದಿನಪತ್ರಿಕೆಗಳಲ್ಲಿ ಒಂದು ಪುಟದ ಜಾಹೀರಾತನ್ನೂ ನೀಡಿತು. 'ಪ್ರತಿಬಾರಿ ನಾವು ಒಬ್ಬರ ಹಸಿವು ತಣಿಸಿದಾಗಲೂ, ಇಂದಿರಾ ಗಾಂಧಿಯವರ ಹೃದಯ ಬೀಗುತ್ತದೆ ಹೆಮ್ಮೆಯಿಂದ' ಎಂದು ಕರ್ನಾಟಕ ಸರಕಾರ ತನ್ನ ಜಾಹೀರಾತಿನಲ್ಲಿ ಇಂದಿರಾ ಅವರನ್ನು ಸ್ಮರಿಸಿಕೊಂಡಿದೆ. ದೇಶ ಮತ್ತು ಕೇಂದ್ರ ಸರಕಾರ ಇಂದಿರಾ ಗಾಂಧಿಯವರ ಜನ್ಮದಿನಾಚರಣೆಯನ್ನು ಆಚರಿಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಬೇಸರಿಸಿಕೊಂಡಿದ್ದಾರೆ.ಇಂದಿರಾ ಗಾಂಧಿ ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಭಾನುವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಟ್ರೆಂಡಿಂಗ್ ನಲ್ಲಿತ್ತು. ಇಂದಿರಾ ಪರ ವಿರೋಧ ಟ್ವೀಟುಗಳು, ಚರ್ಚೆಗಳ ನಡೆಯುತ್ತಲೇ ಇದ್ದವು. ಭಾರತವನ್ನು ಇಬ್ಭಾಗ ಮಾಡಲು ಹೊರಟಿದ್ದ ಸೆಕ್ಯೂಲರ್ ಶಕ್ತಿಯ ವಿರುದ್ದ ಹೋರಾಡಿದ ದಿಟ್ಟ ಮಹಿಳೆ ಇಂದಿರಾ ಗಾಂಧಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತನ್ನ ಅತ್ತೆಯನ್ನು ಸ್ಮರಿಸಿಕೊಂಡಿದ್ದಾರೆ.

Recommended