ಕೇಳಿ ಇಲ್ಲಿ! ನಿಮಗೆ ಈ ಅಭ್ಯಾಸಗಳಿದ್ದರೆ ಮೊದಲು ಬಿಟ್ಟು ಬಿಡಿ | Oneindia Kannada

  • 6 years ago
ಸೊಂಪಾದ ನಿದ್ರೆಯಲ್ಲಿರುವಾಗ ನಮಗೆ ಬಾಹ್ಯ ಜಗತ್ತಿನ ಅರಿವಿರುವುದಿಲ್ಲ. ಹೀಗಿರುವಾಗ ನಮ್ಮ ಕೇಶರಾಶಿಗೆ ಏನಾಗುತ್ತದೆ ಎನ್ನುವುದರ ಬಗ್ಗೆ ಅರಿಯಲು ಸಾಧ್ಯವಿಲ್ಲ. ಆದರೆ ಬೆಳಗ್ಗೆ ನಿದ್ರೆಯನ್ನು ಮುಗಿಸಿ ಎದ್ದಾಗ ಮಾತ್ರ ಕೇಶರಾಶಿಯು ಆರೋಗ್ಯವಾಗಿ ಕಂಗೊಳಿಸಬೇಕೆಂದು ಬಯಸುತ್ತೇವೆ. ಈ ಬಯಕೆ ಈಡೇರಬೇಕೆಂದರೆ ಮಲಗುವ ಮುನ್ನವೇ ಕೇಶರಾಶಿಯ ಬಗ್ಗೆ ಕೆಲವು ಆರೈಕೆ ಕೈಗೊಳ್ಳಬೇಕು. ಮುಂಜಾನೆಯ ಹರಿಬರಿಯಲ್ಲಿ ಕೇಶರಾಶಿಗಾಗಿ ಸಮಯ ವ್ಯಯಿಸುವುದನ್ನು ತಡೆಯಬಹುದು. ಕೆಲವರು ಉದ್ದನೆಯ ಕೇಶರಾಶಿಯಿದ್ದರಷ್ಟೇ ಹೆಚ್ಚು ಗಮನ ಕೊಡಬೇಕಾಗುವುದು ಎಂದು ಆದಷ್ಟು ಚಿಕ್ಕ ಕೇಶರಾಶಿಯನ್ನು ಹೊಂದಲು ಇಷ್ಟಪಡುತ್ತಾರೆ. ಸತ್ಯವೇನೆಂದರೆ ಕೇಶರಾಶಿ ಉದ್ದವಾಗಿರಲಿ ಅಥವಾ ಚಿಕ್ಕದಾಗಿರಲಿ ಅದರ ಆರೈಕೆ ಮಾಡಿದಾಗ ಮಾತ್ರ ಆರೋಗ್ಯಕರವಾಗಿರುತ್ತದೆ. ಇಲ್ಲವಾದರೆ ಒರಟಾಗುವುದು, ಟಿಸಿಲೊಡೆಯುವುದು, ಬಹುಬೇಗ ಕಾಂತಿಯನ್ನು ಕಳೆದುಕೊಳ್ಳುವ ಸಮಸ್ಯೆಯನ್ನು ಎದುರಿಸಬೇಕಾಗುವುದು. ಒತ್ತಡದ ಜೀವನದಲ್ಲೂ ಕೇಶರಾಶಿಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಬೇಕೆಂದರೆ ಈ ಕೆಳಗಿನ ಕ್ರಮ ಕೈಗೊಳ್ಳಬೇಕು.ಮಲಗುವ ಮುನ್ನ ಕೇಶರಾಶಿಯನ್ನು ಸ್ವಲ್ಪ ತೆಂಗಿನೆಣ್ಣೆ ಅಥವಾ ನಿಮ್ಮ ಬಳಕೆಯಲ್ಲಿರುವ ಹೇರ್ ಆಯಿಲ್ ಬಳಸಿ ಮಸಾಜ್ ಮಾಡಿ. ನಂತರ ನೀಟಾಗಿ ಕೂದಲನ್ನು ಮೃದುವಾದ ರಬ್ಬರ್ ಬ್ಯಾಂಡ್‍ನಿಂದ ಕಟ್ಟಿ ಮಲಗಿ. ಬೆಳಗ್ಗೆಯ ತನಕ ಕೂದಲಿಗೆ ಸಂಪೂರ್ಣ ಪೋಷಣೆ ಸಿಗುತ್ತದೆ. ಬೆಳಗ್ಗೆ ತಲೆ ಸ್ನಾನ ಮಾಡಿದರೆ ಆರಾಮದಾಯಕ ಅನುಭವ ನಿಮ್ಮದಾಗುವುದು

when you are in deep sleep there will be no awareness with the outside world, at the time there will also be no attention about your hair , dont know what to do, check out here for the solution , watch this video

Recommended