Skip to playerSkip to main contentSkip to footer
  • 8 years ago
ಮೂರು ವಾರಗಳ ಕಾಲ ಸಿಹಿ ಕಹಿ ಚಂದ್ರು ಕೈಯಲ್ಲಿ ಇದ್ದ ಅಡುಗೆ ಮನೆ, ನಾಲ್ಕನೇ ವಾರ ಕೈತಪ್ಪಿದಾಗ ನಟಿ ಅನುಪಮಾ ಗೌಡ, ಕೃಷಿ ತಾಪಂಡ, ಆಶಿತಾ ಸಹಿಸಿಕೊಳ್ಳಲಿಲ್ಲ. ಮೂರು ವಾರಗಳಿಂದ ಅಡುಗೆ ಮನೆ ಡಿಪಾರ್ಟ್ಮೆಂಟ್ ನಲ್ಲಿದ್ದ ಕೃಷಿ, ಆಶಿತಾ, ಸಿಹಿ ಕಹಿ ಚಂದ್ರು ರವರನ್ನ ಬೇರೆ ಡಿಪಾರ್ಟ್ಮೆಂಟ್ ಗೆ ವರ್ಗಾಯಿಸಿ, ನಾಲ್ಕನೇ ವಾರ ಅಡುಗೆ ಮನೆಯ ಸುಪರ್ದಿಯನ್ನ ಚಂದನ್ ಶೆಟ್ಟಿ ಹಾಗೂ ಸಮೀರಾಚಾರ್ಯಗೆ ಕ್ಯಾಪ್ಟನ್ ರಿಯಾಝ್ ವಹಿಸಿದ್ದರು. ರಿಯಾಝ್ ರವರ ಈ ನಡೆ ಅನುಪಮಾ ಅಂಡ್ ಗ್ಯಾಂಗ್ ಗೆ ಇಷ್ಟ ಆಗಲಿಲ್ಲ. ಇದೇ ಕಾರಣಕ್ಕೆ, ಆಗಾಗ ಸಮೀರಾಚಾರ್ಯ, ಚಂದನ್ ಶೆಟ್ಟಿ ಬಗ್ಗೆ ಅನುಪಮಾ ಗೌಡ ಕಂಪ್ಲೇಂಟ್ ಮಾಡುತ್ತಲೇ ಇದ್ದರು. ''ಅಡುಗೆ ಚೆನ್ನಾಗಿ ಮಾಡುತ್ತಿಲ್ಲ, ಗಲೀಜು ಬೇರೆ'' ಅಂತ ದೂರುತ್ತಿದ್ದ ಅನುಪಮಾ ಗೌಡ, ರಿಯಾಝ್ ಸ್ಟಾಕ್ ಚೆಕ್ಕಿಂಗ್ ಮಾಡಿದ್ದಕ್ಕೂ ಮುನಿಸಿಕೊಂಡರು. ಮುಂದೆ ಓದಿರಿ....ರಿಯಾಝ್ ಕ್ಯಾಪ್ಟನ್ ಆದ ಕೂಡಲೆ, ಹಣ್ಣುಗಳನ್ನ ಎಲ್ಲರಿಗೂ ಸಮನಾಗಿ ಹಂಚಿದರು. ಇದೂ ಕೂಡ ಅನುಪಮಾ ಗೌಡ, ಆಶಿತಾ, ಕೃಷಿಗೆ ಸಿಟ್ಟು ತರಿಸಿತು.ಹಿಂದಿನ ವಾರ ಸಮೀರಾಚಾರ್ಯ ಕ್ಯಾಪ್ಟನ್ ಆಗಿದ್ದಾಗ, ಅವರಿಗೆ ಅಡುಗೆ ಮಾಡಿಕೊಳ್ಳಲು ಸರಿಯಾಗಿ ಸಮಯ ಸಿಗದ ಕಾರಣ ಸಮೀರಾಚಾರ್ಯ ಹೆಚ್ಚು ಹಣ್ಣುಗಳನ್ನು ಸೇವಿಸಿದ್ದರು. ಇದರ ಬಗ್ಗೆ ಅದೇ ಸೆಲೆಬ್ರಿಟಿ ಸ್ಪರ್ಧಿಗಳು ಪ್ರಶ್ನೆ ಮಾಡಿದ್ದಕ್ಕೆ, ಹಣ್ಣುಗಳನ್ನ ಹಂಚಿಬಿಡುವುದೇ ವಾಸಿ ಅಂತ ರಿಯಾಝ್ ಸಮನಾಗಿ ಹಂಚಿಕೆ ಮಾಡಿದರು.

bigg boss season 05 : Riyaz was wrong. However, Anupama did it right.watch this video

Category

🗞
News

Recommended