ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್ | Filmibeat Kannada

  • 7 years ago
Singer and Music Director Raghu Dixith to judge Sa Re Ga Ma Pa Lil Champs Season 14. Maha Guru Rajesh Krishnan walks out from the show

ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್. ವಾರಾಂತ್ಯ ಬಂತು ಅಂದ್ರೆ ಸಾಕು ಮನೆ ಮಂದಿಯೆಲ್ಲಾ ಸಣ್ಣ ಸಣ್ಣ ಮಕ್ಕಳು ಹಾಡುವ ಹಾಡುಗಳನ್ನ ಹೇಳಿ ಎಂಜಾಯ್ ಮಾಡೋ ಕಾರ್ಯಕ್ರಮ ಅಂದ್ರೆ ಜೀ ಟಿವಿ ನಲ್ಲಿ ನಡೆಯುವ ಸರಿಗಮಪ. ಸಾಕಷ್ಟು ಸೀಸನ್ ಗಳಿಂದ ಮುಖ್ಯ ಗುರುಗಳಾಗಿ ಕಾರ್ಯಕ್ರಮ ನಡೆಸಿಕೊಡ್ತಿದ್ದ ತೀರ್ಪುಗಾರರಾದ ನಟ-ಗಾಯಕ ರಾಜೇಶ್ ಕೃಷ್ಣನ್ 'ಸರಿಗಮಪ' ಫ್ಯಾಮಿಲಿಯಿಂದ ಹೊರ ನಡೆದಿದ್ದಾರೆ. 'ಸರಿಗಮಪ' ಲಿಟಲ್ ಚಾಂಪ್ಸ್ 'ಮೆಗಾ ಆಡಿಷನ್ಸ್' ಈಗಾಗ್ಲೆ ಶುರುವಾಗಿದೆ. ಇನ್ನ ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಕೂಡ ಶುರುವಾಗಲಿದೆ. ಇದೇ ಸಂದರ್ಭದಲ್ಲಿ ರಾಜೇಶ್ ಕೃಷ್ಣನ್ ಶೋ ಬಿಟ್ಟು ಜಾಗ ಖಾಲಿ ಮಾಡಿದ್ದಾರೆ. ಸಾಕಷ್ಟು ವರ್ಷಗಳಿಂದ 'ಸರಿಗಮಪ' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದ ರಾಜೇಶ್ ಕೃಷ್ಣನ್ ಸದ್ಯ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ. ಹದಿನಾಲ್ಕನೆಯ ಸೀಸನ್ ನ ಆಡಿಷನ್ಸ್ ಪ್ರಾರಂಭವಾಗಿದ್ದು ಈ ಬಾರಿ ಅವ್ರ ಜಾಗದಲ್ಲೇ ಬೇರೆಯವರನ್ನ ನೋಡಬಹುದು.

Recommended