ಬಿಜೆಪಿ ನವ ಕರ್ನಾಟಕ ನಿರ್ಮಾಣ ಯಾತ್ರೆ : ಸಿದ್ದರಾಮಯ್ಯ ಮೇಲೆ ಎಗರಾಡಿದ ಬಿ ಎಸ್ ಯಡಿಯೂರಪ್ಪ

  • 7 years ago
'ಸಿದ್ದರಾಮಯ್ಯ ಮಠಕ್ಕೆ ಹೋಗಿದ್ದರೆ ಅದು ಅಪವಿತ್ರ ಆಗುತ್ತಿತ್ತು' 'ಮುಖ್ಯಮಂತ್ರಿ ಸಿದ್ದರಾಮಯ್ಯ ಕೃಷ್ಣ ಮಠಕ್ಕೆ ಇದುವರೆಗೂ ಭೇಟಿ ನೀಡದಿರುವುದು ಒಳ್ಳೆಯದೇ ಆಯಿತು. ಅವರು ಮಠಕ್ಕೆ ಹೋಗಿದ್ದರೆ ಅದು ಅಪವಿತ್ರ ಆಗುತ್ತಿತ್ತು' ಎಂದು ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ಭಾನುವಾರ ಉಡುಪಿ ಜಿಲ್ಲೆಯಲ್ಲಿ ಸಂಚಾರ ನಡೆಸಿತು. ಕಾಪು, ಕಾರ್ಕಳ, ಉಡುಪಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಬಿಜೆಪಿ ನಾಯಕರು ಮಾತನಾಡಿದರು. ಯಡಿಯೂರಪ್ಪ, ಶ್ರೀರಾಮುಲು, ಶೋಭಾ ಕರಂದ್ಲಾಜೆ ಸೇರಿದಂತೆ ವಿವಿಧ ನಾಯಕರು ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಸಮಾವೇಶದಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, 'ರಾಜ್ಯದಲ್ಲಿ ಒಟ್ಟು 3.28 ಲಕ್ಷ ಕೋಟಿ ಬಂಡವಾಳ ಹೂಡಿಕೆಯ ಒಪ್ಪಂದ ಆಗಿತ್ತು. ಆದರೆ, ಕಮೀಷನ್ ಕೇಳಿದ ಕಾರಣ ಅವರು ಹಿಂದಕ್ಕೆ ಹೋದರು' ಎಂದು ಆರೋಪಿಸಿದರು.ಸೋಮವಾರ ಯಾತ್ರೆ ಕುಂದಾಪುರ, ಬೈಂದೂರು, ಭಟ್ಕಳ ಮಾರ್ಗವಾಗಿ ಕುಮುಟಾ ತಲುಪಲಿದೆ. ಇಂದಿನಿಂದ ಬೆಳಗಾವಿಯಲ್ಲಿ ವಿಧಾನಸಭೆ ಕಲಾಪವೂ ಆರಂಭವಾಗಲಿದ್ದು, ಶಾಸಕರು ಅಧಿವೇಶನದಲ್ಲಿಪಾಲ್ಗೊಳ್ಳಲಿದ್ದಾರೆ.

Recommended