ಊಟ ಮಾಡುವಾಗ ಮಾತನಾಡಿದರೆ ಈ ನಷ್ಟಗಳು ತಪ್ಪಿದ್ದಲ್ಲ.. ತಟ್ಟೆಯಲ್ಲಿ ಊಟ ಹಾಕಿಕೊಂಡ ಕೂಡಲೆ ಸುತ್ತಲೂ ಕೆಲವು ಸೂಕ್ಷ್ಮ ಕ್ರಿಮಿಗಳು ಸೇರುತ್ತವೆ. ನಾವು ತಿನ್ನುವುದನ್ನು ನಿಲ್ಲಿಸಿ ಮಾತನಾಡುವುದನ್ನು ಶುರು ಮಾಡಿದರೆ ಅವು ನಿಧಾನಕ್ಕೆ ಆಹಾರದ ಮೇಲೆ ದಾಳಿ ಮಾಡಬಹುದು. ನಾವು ಕೈಯನ್ನು ತಟ್ಟೆಯಲ್ಲಿ ವೇಗವಾಗಿ ಕದಲಿಸುತ್ತಿದ್ದರೆ ಮಾತ್ರ ಅವನ್ನು ದೂರ ಮಾಡಬಹುದು. ತಟ್ಟೆಯ ಸುತ್ತಲೂ ಕ್ಲೀನ್ ಆಗಿದ್ದರೂ ಅವು ದೂರ ಹೋಗುವುದಿಲ್ಲ.ನಮ್ಮ ಶ್ವಾಸ ನಾಡಿ, ಆಹಾರ ನಾಡಿ ಅಕ್ಕಪಕ್ಕದಲ್ಲೇ ಇರುತ್ತವೆ. ತಿನ್ನುವಾಗ ಒಂದು ಸಂಪೂರ್ಣ ತೆರೆದುಕೊಳ್ಳುತ್ತದೆ. ಅದಕ್ಕೆ ಸರಿಯಾಗಿ ಕೆಲಸ ಕೊಡದೆ ಮಾತನಾಡುತ್ತಾ ಸ್ವರಪೆಟ್ಟಿಗೆಗೆ ಮಾತ್ರ ಕೆಲಸ ಕೊಟ್ಟರೆ ಆಹಾರ ಶ್ವಾಸ ನಾಡಿಯಲ್ಲಿ ಸಿಲುಕುವ ಅಪಾಯ ಇದೆ. ನಾವು ತಿನ್ನುವಾಗ ಸೀನಿದರೆ ಮೂಗಿನಿಂದ ಅನ್ನದ ಅಗುಳು ಬರುವುದು ಗೊತ್ತೇ ಇದೆ ಅಲ್ಲವೇ?ಇನ್ನೊಂದು ಮುಖ್ಯವಾದ ಸಂಗತಿ ಎಂದರೆ…ನಾವು ತಿನ್ನುವಾಗ ಏನು ತಿನ್ನುತ್ತಿದ್ದೋ ನೋಡಿಕೊಂಡು ತಿನ್ನಬೇಕು. ಅದೇ ರೀತಿ ತಿನ್ನುವಾಗ ಮನಸ್ಸೂ ಪ್ರಶಾಂತವಾಗಿ ಇರಬೇಕು. ಆಗಲೇ ತಿನ್ನುವುದರ ಬಗ್ಗೆ ಇಷ್ಟ ಆಗಿ ರಸಾಸ್ವಾದನೆ ನಡೆಯುತ್ತದೆ. ಇಲ್ಲದಿದ್ದರೆ ತಿಂದದ್ದು ಸರಿಯಾಗಿ ಜೀರ್ಣ ಆಗಲ್ಲ. ಮನಸ್ಸು ಸರಿ ಇಲ್ಲದಿದ್ದರೆ ಮಿದುಳೂ ಕೆಲಸ ಮಾಡಲ್ಲ. ಹಾಗಾಗಿ ಊಟ ಮಾಡುವಾಗ ಮಾತನಾಡದೆ, ನೆಮ್ಮದಿಯಾಗಿ, ಯಾವುದೇ ಗಾಬರಿ, ಕೋಪ ತಾಪ ಇಲ್ಲದಂತೆ ತಿನ್ನಬೇಕು.ತಿನ್ನುವಾಗ ನಿಧಾನಕ್ಕೆ ತಿಂದರೆ ತಿಂದದ್ದು ಜೀರ್ಣವಾಗುತ್ತದೆ. ಆ ರೀತಿ ಅಲ್ಲದೆ ಮಾತನಾಡುತ್ತಾ ತಿಂದರೆ ನಮ್ಮ ಅಗತ್ಯಕ್ಕಿಂತ ಹೆಚ್ಚಾಗಿಯೂ ತಿನ್ನಬಹುದು..ಅಥವಾ ತಿನ್ನದೆಯೂ ಇರಬಹುದು… ಆದ ಕಾರಣ ಯಾವುದೇ ಕೆಲಸ ಮಾಡಿದರೂ ಶ್ರದ್ಧೆಯಿಂದ ಮಾಡಿದರೆ ಸಂಪೂರ್ಣವಾಗುತ್ತದೆ. ಅದೇ ರೀತಿ ಊಟವನ್ನೂ ಸಹ…
don't talk while eating food, its not good for health,..reason is here .watch this video