ಕರ್ನಾಟಕ ಚುನಾವಣೆ 2018 : ಕಾಂಗ್ರೆಸ್ ಗೆ ಅನುಕೂಲವಾಗುವಂತಹ ಕೆಲವು ಸಂಧರ್ಬಗಳು | Oneindia Kannada

  • 7 years ago
ಮೈ ಮರೆಯೋ ಚಾಳಿಯ ಕಾಂಗ್ರೆಸ್, 2 ತಿಂಗಳಲ್ಲಿ ಆಟ ಬದಲಿಸಬಹುದಾದ ಬಿಜೆಪಿ. ಬಿಜೆಪಿಯವರ ಪರಿವರ್ತನಾ ಯಾತ್ರೆಯಲ್ಲಿ ದೂಳು, ರಚ್ಚು, ವೈಮನಸ್ಯವೇ ಎದ್ದು ಕಾಣುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಗೆ ಮುಂದಿನ ವಿಧಾನಸಭಾ ಚುನಾವಣೆ ಫಲಿತಾಂಶ ಹೆಚ್ಚು ಆಶಾದಾಯಕವಾಗಿರುತ್ತದಾ ಎಂಬ ಪ್ರಶ್ನೆ ಹಾಗೂ ನಿರೀಕ್ಷೆ ಕಾಣುತ್ತಿದೆ. ಒಂದು ವೇಳೆ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಾದ ಅಪಸವ್ಯಗಳೇನಾದರೂ ಕಾಂಗ್ರೆಸ್ ನಲ್ಲಿ ಕಂಡಿದ್ದರೆ ಅದರ ಕಥೆಯೇ ಬೇರೆ ಇರುತ್ತಿತ್ತು. ಈಗಲೇ ಚುನಾವಣೆ ನಡೆದರೆ ಅದು ಕಾಂಗ್ರೆಸ್ ಗೆ ಸರಳ ಬಹುಮತ ತಂದುಕೊಡುವ ಎಲ್ಲ ಸಾಧ್ಯತೆ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ. ಇನ್ನಾರು ತಿಂಗಳ ನಂತರ ಚುನಾವಣೆ ನಡೆದರೆ ಎಂಬ ಪ್ರಶ್ನೆ ಮುಂದಿಟ್ಟರೆ, ಅದಕ್ಕೆ ಎಂಥ ವಿಶ್ಲೇಷಕರಿಂದಲೂ ಉತ್ತರ ಅಸಾಧ್ಯ ಎಂಬ ಮಾತು ಕೇಳಿಬರುತ್ತದೆ."ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವಂತಿದ್ದರೆ ಅದು ಮತದಾನಕ್ಕೆ ಮುಂಚಿನ ಎರಡು ತಿಂಗಳಿಂದ ಆರಂಭವಾಗುತ್ತದೆ. ಅಂತಹ ವಿಚಾರಗಳನ್ನು ಜನರ ಮಧ್ಯೆ ಯಾರು ತೆಗೆದುಕೊಂಡು ಹೋಗುತ್ತಾರೋ ಅವರ ಪರವಾಗಿ ಫಲಿತಾಂಶ ಬರುತ್ತದೆ. ಆದ್ದರಿಂದ ಇಷ್ಟು ಮುಂಚಿತವಾಗಿ ಹೀಗೆ ಅಂತ ಹೇಳುವುದು ಸಾಧ್ಯವಿಲ್ಲ" ಎಂಬ ಅಭಿಪ್ರಾಯ ಪಡುತ್ತಾರೆ ರಾಜಕೀಯ ವಿಶ್ಲೇಷಕರು ಹಾಗೂ ಚಿಂತಕರಾದ ಶಿವಸುಂದರ್.
Here is an analysis about how the situations & conditions that are favorable for Congress in Karnataka for assembly elections 2018.

Recommended