ಬಿಗ್ ಬಾಸ್ ಕನ್ನಡ ಸೀಸನ್ 5 : ಜೈ ಶ್ರೀನಿವಾಸನ್ ಪಂಚಿಂಗ್ ಡೈಲಾಗ್ಸ್ ಫುಲ್ ಜೋರು | Filmibeat Kannada

  • 7 years ago
'ದೊಡ್ಮನೆ'ಯ 'ಹೆಬ್ಬುಲಿ' ಜಯಶ್ರೀನಿವಾಸನ್ ಡೈಲಾಗ್ ಗಳು ಒಂದಾ ಎರಡಾ.. ಅಬ್ಬಬ್ಬಾ.! ನಿಜ ಹೇಳ್ಬೇಕಂದ್ರೆ, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ತಮ್ಮ ಮ್ಯಾನರಿಸಂ ಹಾಗೂ ಪಂಚಿಂಗ್ ಡೈಲಾಗ್ ಗಳಿಂದ ಮಸ್ತ್ ಮನರಂಜನೆ ನೀಡುತ್ತಿರುವವರು ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್. ಸಣ್ಣ ಪುಟ್ಟ ವಿಷಯಕ್ಕೆ ಆಶಿತಾ ಚಂದ್ರಪ್ಪ ಹಾಗೂ ದಯಾಳ್ ಪದ್ಮನಾಭನ್ ಕೆಂಗಣ್ಣಿಗೆ ಗುರಿಯಾಗಿದ್ದ ಜಯಶ್ರೀನಿವಾಸನ್ ಇದೀಗ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅನಿಸಿದ್ದನ್ನ ನೇರವಾಗಿ ಹೇಳುತ್ತಾರೆ. ಯಾವ ಸ್ಯಾಂಡಲ್ ವುಡ್ ಹೀರೋಗೂ ಕಮ್ಮಿ ಇಲ್ಲ ಎನ್ನುವಂತೆ ಡಿಸೈನ್ ಡಿಸೈನ್ ಡೈಲಾಗ್ ಹೊಡೆಯುತ್ತಾರೆ... ರಜನಿಕಾಂತ್ ಸ್ಟೈಲ್ ನಲ್ಲಿ ನಗುತ್ತಾರೆ...'ಹೆಬ್ಬುಲಿ' ಬಂದಿದೆ... 'ಹೆಬ್ಬುಲಿ' ಬಂದಿದೆ... ಹುಲಿ ಹುಲಿ ಹೆಬ್ಬುಲಿ... ಹುಲಿ ಹುಲಿ ಹೆಬ್ಬುಲಿ... ಜಯಶ್ರೀನಿವಾಸನ್ ಇಲ್ಲಿ... ಸುಮ್ನೆ ಇರಿ ಅಲ್ಲಿ.... ಅಂತ 'ಹೆಬ್ಬುಲಿ' ಚಿತ್ರದ ಶೀರ್ಷಿಕೆ ಗೀತೆಯನ್ನ ತಮಗೆ ಬೇಕಾದ ಹಾಗೆ ರೀಮಿಕ್ಸ್ ಮಾಡಿಕೊಂಡು 'ಬಿಗ್ ಬಾಸ್' ಮನೆಯಲ್ಲಿ ಹಾಡುತ್ತಿರುತ್ತಾರೆ ಜಯಶ್ರೀನಿವಾಸನ್.

Recommended