ಲಿಂಗಾಯಿತರು ಎಡಬಿಡಂಗಿಗಳು ಚಂದ್ರಶೇಖರ್ ಪಾಟೀಲ್ | Oneindia Kannada

  • 7 years ago
ಲಿಂಗಾಯತ ಸಮುದಾಯಕ್ಕೆ ಸಂವಿಧಾನ ಬದ್ಧವಾಗಿ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು ಎಂದು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರೂ ಆದ ಕವಿ, ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ಅಭಿಪ್ರಾಯಪಟ್ಟರು. ಜಿಲ್ಲಾ ಪತ್ರಕರ್ತರ ಸಂಘದ ಕಚೇರಿಯ ಸಭಾಂಗಣದಲ್ಲಿ ಅ.21ರಂದು ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಲಿಂಗಾಯತ ಸಮುದಾಯದ ಪರವಾಗಿದ್ದೇನೆ. ರಂಭಾಪುರಿ ಮಠದ ಸ್ವಾಮೀಜಿ, ಕೆಲ ವಿರಕ್ತ ಮಠಗಳವರು ಇದನ್ನು ವಿರೋಧಿಸುತ್ತಿದ್ದಾರೆ. ಬೌದ್ಧ, ಜೈನ, ಸಿಖ್ ಧರ್ಮಗಳಿಗೆ ನೀಡಿರುವಂತೆ ಲಿಂಗಾಯತ ಸಮುದಾಯಕ್ಕೂ ಅಲ್ಪಸಂಖ್ಯಾತ ಧರ್ಮವೆಂದು ಮಾನ್ಯತೆ ನೀಡಲಿ ಎಂದು ಆಗ್ರಹಿಸಿದರು. ಹಿಂದುತ್ವ ಬಲಪಂಥ, ವೀರಶೈವ ಎಡ ಪಂಥ ಆದರೆ ಲಿಂಗಾಯಿತರದು ಎಡಬಿಡಂಗಿ ವಾದ ಎಂದು ಫ್ರೋ ಚಂದ್ರಶೇಖರ್ ಪಾಟೀಲ್ ಹೇಳಿದ್ದಾರೆ.
Lingayat religion should get separate constitutional recognition, president of 83rd Kannada Sahitya Sammelana which will be taking place on 24th to 26th November in Mysuru, Chandrashekhar Patil told to media in Mysuru

Recommended