Yash Is Not A ‘Show Off Star’ saya’s, Director Santhosh Ananddram | Filmibeat Kannada

  • 7 years ago
Kannada Director Santhosh Anandram Talk About Rashmika Mandanna Controversial Statement on Rocking Star Yash.

'ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ಉದ್ದೇಶವಿಲ್ಲದೇ ಹೇಳಿದ ಒಂದು ಮಾತು ಈಗ ರಾಕಿಂಗ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ನಟಿಯ ವಿರುದ್ಧ 'ರಾಜಾಹುಲಿ' ಹುಡುಗರು ಕೆಂಡ ಕಾರುತ್ತಿದ್ದಾರೆ. ಮತ್ತೊಂದೆಡೆ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರು 'ಮಿಸ್ಟರ್ ರಾಮಾಚಾರಿ'ಯನ್ನ 'ಶೋ ಆಫ್' ಎಂದವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ರಾಕಿಂಗ್ ಸ್ಟಾರ್ ಒಬ್ಬ 'ಶೋ ಮ್ಯಾನ್' ಎಂದು ಸಮರ್ಥಿಸಿಕೊಂಡಿದ್ದಾರೆ. ಯಶ್ ಅವರನ್ನ ಯಾಕೆ 'ಶೋ ಮ್ಯಾನ್' ಎನ್ನಬೇಕು ಎನ್ನುವುದಕ್ಕೆ ಕೂಡ ಕೆಲವೊಂದು ಅಂಶಗಳನ್ನ ಉದಾಹರಣೆಯಾಗಿಟ್ಟು ಮಾತನಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ 'ಶೋ ಆಫ್' ಅಲ್ಲಾ ಕನ್ನಡದ 'ಶೋ ಮ್ಯಾನ್' ಎಂದು ಕನ್ನಡದ ಸಕ್ಸಸ್ ಫುಲ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಟಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.

''ಇತ್ತೀಚಿನ ವರ್ಷಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆಯನ್ನ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಮಾರುಕಟ್ಟೆ ಹೇಗಿದೆ ತೋರಿಸಿದ್ದಾರೆ, ಸಾಮಾಜಿಕ ಕಾರ್ಯಗಳ ಮೂಲಕ ಜನರ ಪ್ರೀತಿಯ ನಟ ಎಂದು ತೋರಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹೊಸ ನಿರ್ದೇಶಕರನ್ನ ತೋರಿಸಿದ್ದಾರೆ. ಕಡಿಮೆ ಸಮಯದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿರುವ ಯಶ್ ಅವರನ್ನ 'ಶೋ ಮ್ಯಾನ್' ಎನ್ನಬೇಕು, ಶೋ ಆಫ್ ಅಲ್ಲ''- ಸಂತೋಷ್ ಆನಂದ್ ರಾಮ್

ರಾಕಿಂಗ್ ಸ್ಟಾರ್ ಯಶ್ ಅಂದ್ರೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಬಹಳ ಅಚ್ಚುಮೆಚ್ಚು. ಈ ಹಿಂದೆ ಕೂಡ ನನ್ನ ಗೆಲುವಿಗೆ, ಯಶಸ್ಸಿಗೆ ಯಶ್ ಅವರೇ ಕಾರಣ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಯಶ್ ಜೊತೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಈಗ ಪುನೀತ್ ಅಭಿನಯದ 'ರಾಜಕುಮಾರ' ಅಂತಹ ಸೂಪರ್ ಹಿಟ್ ಚಿತ್ರದ ನಿರ್ದೇಶಕ ಕೂಡ ಇವರೇ.

''ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ Mr Show Off ಅಲ್ಲಾ, Mr Show Man. ಯಶ್ ಬಾಸ್ ಗೆ ಕ್ಷಮೆ ಕೇಳಬೇಕು'' ಅಂತ ಯಶ್ ಅಭಿಮಾನಿಗಳು ಹೇಳುತ್ತಿದ್ದಾರೆ.

ರಶ್ಮಿಕಾ ಈ ಹಿಂದೆ ಹಲವು ಬಾರಿ ಯಶ್ ಅವರ ನಟನೆ ಅಂದ್ರೆ ನನಗೆ ಇಷ್ಟ. ಅವರ ಜೊತೆ ಸಿನಿಮಾ ಸಿಕ್ಕರೆ ಹಿಂದು ಮುಂದು ನೋಡದೆ ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದರು. ಅಲ್ಲದೆ ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಪಾಸಿಟಿವ್ ಆಗಿ ಸಹ ಮಾತನಾಡಿದ್ದಾರೆ. ಇದು ರಶ್ಮಿಕಾ ಅವರು ಆತುರದಲ್ಲಿ ಹೇಳಿದ ಮಾತು ಎಂಬುದು ಈ ಸಂದರ್ಶನ ನೋಡಿದವರಿಗೆ ಗೊತ್ತಾಗುತ್ತೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಅವರಿಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ 'ಶೋ ಆಫ್' ಅಂತ ನಿಮಗೆ ಅನಿಸುತ್ತದೆ ಅಂತ ಪ್ರಶ್ನೆ ಕೇಳಿದ್ದರು. ನಿರೂಪಕರ ಆ ಪ್ರಶ್ನೆಗೆ ರಶ್ಮಿಕಾ ಮೊದಲು 'ಯಾರು ಇಲ್ಲ.. ನಾನು ಸುಮ್ನೆ ಈ ಪ್ರಶ್ನೆಗೆ ಉತ್ತರಿಸಿ ತೊಂದರೆಗೆ ಸಿಕ್ಕಿ ಹಾಕಿ ಕೊಳ್ಳುವುದಿಲ್ಲ' ಅಂತ ಹೇಳಿದರು. ಕೊನೆಗೆ ಯಶ್ ಸರ್ ಅಂತ ಹೇಳಿದರು.

Recommended