Skip to playerSkip to main contentSkip to footer
  • 11 years ago
TV9 News: Bangalore School Rape: Amid Mob Violence, Life Returning To Normal After 2 Days....,

ಕಳೆದ ಎರಡು ದಿನಗಳ ಹಿಂದೆ ರಣರಂಗವಾಗಿ ಹೋಗಿದ್ದ ಹೊಸಗುಡ್ಡದ ಹಳ್ಳಿ ಸಹಜ ಸ್ಥಿತಿಗೆ ಮರಳುತ್ತಿದೆ. ವಿದ್ಯಾರ್ಥಿನಿಯ ಮೇಲೆ ದೈಹಿಕ ಶಿಕ್ಷಕ ಲೈಂಗಿಕ ಕಿರುಕುಳ ನೀಡಿದ್ದಾನೆ ಅನ್ನೋ ಕಾರಣಕ್ಕೆ ಹೊಸಗುಡ್ಡದ ಹಳ್ಳಿ ಮೊನ್ನೆ ಮೊನ್ನೆ ಹೊತ್ತಿ ಹುರಿದಿತ್ತು. ಘಟನೆಯ ನಂತರ ಇಡೀ ವಾತಾವರಣ ಬೂದಿ ಮುಚ್ಚಿ ಕೆಂಡವಾಗಿತ್ತು. ಇದೀಗ ಪರಸ್ಥಿತಿ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.. ಯಾವುದೇ ರೀತಿಯ ಗಲಭೆಗೆ ಆಸ್ಪದಕೊಡದಂತೆ ಪೊಲೀಸರು ಮುನ್ನೇಚ್ಚರಿಕೆ ವಹಿಸಿದ್ದರು. ಇನ್ನು ಬ್ಯಾಟರಾಯನಪುರ ಹಾಗು ಜೆಜೆ ನಗರ ಠಾಣಾ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿಧಿಸಲಾಗಿದ್ದ ಸೆಕ್ಷನ್ 144 ರಾತ್ರಿ 12 ಗಂಟೆ ನಂತರ ತೆರವುಗೊಳಿಸಲಾಗಿದೆ. ರಸ್ತೆಗಿಳಿಯಲು ಭಯ ಪಡುತ್ತಿದ್ದ ಜನ ಇಂದಿನಿಂದ ನಿಧಾನವಾಗಿ ರಸ್ತೆಗಿಳಿಯುತ್ತಿದ್ದಾರೆ. ಆದ್ರೂ ಸಹ ಕಳೆದ ರಾತ್ರಿಯು ಓರ್ವ ಡಿಸಿಪಿ, ಇಬ್ಬರು ಎಸಿಪಿ, ನಾಲ್ಕು ಮಂದಿ ಇನ್​ಸ್ಪೆಕ್ಟರ್ ಗಳು ಸೇರಿದಂತೆ 75 ಕ್ಕೂ ಹೆಚ್ಚು ಮಂದಿ ಪೊಲೀಸರು ಭದ್ರತೆಗೆ ರಾತ್ರಿಯಿಡಿ ಗಸ್ತಿನಲ್ಲಿದ್ದರು. ಹೀಗಾಗಲೆ ರಾತ್ರಿ 12 ಗಂಟೆಯಿಂದಲೇ 144 ಸೆಕ್ಷನ್ ಜಾರಿಯನ್ನು ತೆರವುಗೊಳಿಸಿದ್ದರು ಕಾನೂನು ಸುವ್ಯವಸ್ಥತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​ ಇನ್ನು ಮುಂದುವರೆಯಲಾಗುವುದು.

Category

🗞
News

Recommended