Skip to playerSkip to main content
  • 11 years ago
TV9 News: Now, Live Heart Transplant in Bangalore..,

ಬೆಂಗಳೂರಿನಲ್ಲಿ ಮತ್ತೊಂದು ಹೃದಯ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಅಂತಾ ಆಸ್ಪತ್ರೆ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಡಾ.ಆನಂದ್ ಸುಬ್ರಮಣ್ಯ ನೇತೃತ್ವದಲ್ಲಿ ಸತತ 4 ಗಂಟೆಗಳ ಕಾಲ ಆಪರೇಶನ್​ ನಡೆಸಲಾಗಿದ್ದು, ಬಾಲಾಜಿಯ ಜೀವಂತ ಹೃದಯವನ್ನು ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ ಕಸಿ ಮಾಡಲಾಗಿದೆ ಅಂತಾ ಟಿವಿ9ಗೆ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ವೆಂಕಟರಮಣ ಹೇಳಿದ್ದಾರೆ.
------------
ಜನವರಿ 1ರಂದು ಅಪಘಾತದಲ್ಲಿ ಬಾಲಾಜಿ ಎಂಬ 21 ವರ್ಷದ ಯುವಕ ಗಾಯಗೊಂಡಿದ್ದ. ಈತನ ಮೆದುಳು ನಿಷ್ಕ್ರಿಯಗೊಂಡಿತ್ತು. ಈತನ ಹೃದಯ ದಾನಕ್ಕೆ ಪೋಷಕರು ನಿರ್ಧರಿಸಿದ್ದು, ಇವತ್ತು ಎಂ.ಎಸ್ ರಾಮಯ್ಯ ಆಸ್ಪತ್ರೆಯಿಂದ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಹೃದಯ ರವಾನೆ ಮಾಡಲಾಗಿತ್ತು. ಬಾಲಾಜಿ ಮರಿಯಪ್ಪನಪಾಳ್ಯದ ಹೊಂಬೇಗೌಡ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಬೆಂಗಳೂರಿನ ಪೈಪ್​​ಲೈನ್​ ರಸ್ತೆಯ ಮುನೇಶ್ವರ ಬ್ಲಾಕ್​ ನಿವಾಸಿಯಾದ ಬಾಲಾಜಿ, ಹೊಸ ವರ್ಷದ ಮೊದಲ ದಿನವೇ ಅಪಘಾತದಲ್ಲಿ ಗಾಯಗೊಂಡಿದ್ದ. ಈತನ ಮೆದುಳು ನಿಷ್ಕ್ರಿಯಗೊಂಡಿತ್ತು.

Category

🗞
News
Be the first to comment
Add your comment

Recommended