More Than 1,000 Cusec Of Water Released From KRS Dam | Madya | Public TV

  • 2 years ago
ಕಾವೇರಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಬರುತ್ತಿದೆ. ಕಳೆದ ಮೂರು ವರ್ಷಗಳ ಬಳಿಕ ಕೆಆರ್‍ಎಸ್ ಡ್ಯಾಂನಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ. ಕಾವೇರಿನದಿ ಪಾತ್ರದ ಜನರು ಪ್ರವಾಹದ ಭೀತಿಯನ್ನು ಎದುರಿಸುವ ಸ್ಥಿತಿ ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ, ಕಾರೇಕುರ, ಮಜ್ಜಿಗೆ ಪುರ, ಬಲಮುರಿ, ಹೊಂಗಹಳ್ಳಿ, ಪಾಲಹಳ್ಳಿ, ಶ್ರೀರಂಗಪಟ್ಟಣ, ಎಣ್ಣೆಹೊಳೆ ಕೊಪ್ಪಲು, ರಾಮಪುರ, ಮೇಳಾಪುರ, ಚಂದಗಾಲು, ಹಂಗರಹಳ್ಳಿ , ಮರಳಗಾಲ, ದೊಡ್ಡಪಾಳ್ಯ, ಚಿಕ್ಕಪಾಳ್ಯ, ಮಹದೇವಪುರ ಸೇರಿದಂತೆ 40 ಅಧಿಕ ಗ್ರಾಮಗಳ ಜಮೀನುಗಳು ಜಲಾವೃತವಾಗಲಿವೆ. ಇದಲ್ಲದೇ ರಂಗನತಿಟ್ಟು ಪಕ್ಷಿಧಾಮ, ಪಶ್ಚಿಮ ವಾಹಿನಿ, ಗೋಸಾಯ್ ಘಾಟ, ಬಿಜಿ ಹೊಳೆ ಸಮೀಪದ ದೇವಸ್ಥಾನಗಳು, ನಿಮಿಷಾಂಭ ದೇವಸ್ಥಾನದ ಸ್ನಾನಘಟ್ಟಗಳು ಜಲಾವೃತವಾಗಲಿವೆ. ಇದಲ್ಲದೇ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತು ಮುಳುಗಡೆಯ ಅಂಚಿಗೆ ಬಂದಿದೆ. ವೆಲ್ಲೆಸ್ಲಿ ಸೇತುವೆ ಮೇಲೆ ಸಂಚಾರ ಬಂದ್ ಮಾಡಲಾಗಿದೆ. ಇದಲ್ಲದೇ ಕಾವೇರಿ ನದಿ ಪಾತ್ರದ ಎಲ್ಲಾ ಪ್ರವಾಸಿ ಸ್ಥಳಗಳು ಬಂದ್ ಆಗುದ್ದು, ನದಿಯಿಂದ 1 ಕಿಲೋಮೀಟರ್ ವ್ಯಾಪ್ತಿಯ ವರೆಗೆ ನಿಷೇಧ ಏರಲಾಗಿದೆ.

#publictv #krsdam

Recommended