News Cafe | ಬಳ್ಳಾರಿಯಲ್ಲಿ ಅನ್ನದಾತರಿಗೆ ಭಾರೀ ಆಘಾತ | HR Ranganath | May 23, 2022

  • 2 years ago
ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾದಿಂದಾಗಿ ನಷ್ಟ- ನೋವು ಅನುಭವಿಸಿದ್ದ ಅನ್ನದಾತರಿಗೆ ಈ ಬಾರಿ ಅಕಾಲಿಕ ಮಳೆ ಹೊಡೆತ ಕೊಟ್ಟಿತ್ತು. ಈ ಮಧ್ಯೆಯೇ ಬಳ್ಳಾರಿಯಲ್ಲಿ ಸಾಲ ಮರು ಪಾವತಿಸುವಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಮೌಖಿಕ ನೋಟಿಸ್ ನೀಡಿವೆ. ಕಳೆದ 1 ತಿಂಗಳಿಂದ ಜಿಲ್ಲೆಯ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ತಾಲೂಕಿನ ನೂರಾರು ರೈತರಿಗೆ ಹೊಸಪೇಟೆಯ ಕಾರ್ಪೋರೇಷನ್ ಬ್ಯಾಂಕ್, ಹಾಗೂ ಯೂನಿಯನ್ ಬ್ಯಾಂಕ್ ಸಾಲ ಮರುಪಾವತಿ ಮಾಡಿ ಇಲ್ಲವಾದರೆ ಆಸ್ತಿ ಜಪ್ತಿ ಮಾಡಲಾಗುತ್ತೆಂದು ನೋಟಿಸ್ ನೀಡಿದೆ. ಇದ್ರಿಂದ ಕಂಗಲಾಗಿರುವ ಅನ್ನದಾತರು, ಕಳೆದ ವರ್ಷವೂ ಅಕಾಲಿಕ ಮಳೆಗೆ ಬೆಳೆ ನಾಶವಾಗಿತ್ತು. ಹೀಗಾಗಿ ಅಸಲು, ಬಡ್ಡಿ ಮರುಪಾವತಿ ಸಾಧ್ಯ ಆಗ್ತಿಲ್ಲ, ಇದೀಗ ಚಕ್ರ ಬಡ್ಡಿ ರೂಪದಲ್ಲಿ ಸಾಲ ದುಪ್ಪಟ್ಟಾಗಿದೆ ಹೇಗೆ ತೀರಿಸೋದು ಅಂತ ತಲೆ ಮೇಲೆ ಕೈಹೊತ್ತಿದ್ದಾರೆ. ಬಡ್ಡಿ ವಿನಾಯ್ತಿಗೆ ಮನವಿ ಮಾಡಿದ್ರೂ ಬ್ಯಾಂಕ್ ಸ್ಪಂದಿಸಿಲ್ಲ. ಬಳಿಕ ರೈತರು ಡಿಸಿ ಅನಿರುದ್ಧ್ ಶ್ರವಣ ಮೊರೆ ಹೋಗಿದ್ದು.. ಡಿಸಿ ವಿಚಾರಣೆ ನಡೆಸಿ, ಸೂಕ್ತವಾದ ನಿರ್ಧಾರ ಮಾಡಲಾಗುವುದು ಎಂದಿದ್ದಾರೆ.

#HRRanganath #NewsCafe #PublicTV

Recommended