Man Working At A Graveyard Needs Challenging Star Darshan's Help; Writes Letter

  • 3 years ago
Man Working At A Graveyard Needs Challenging Star Darshan's Help; Writes Letter

ಮಂಡ್ಯ ಅಖಾಡದಲ್ಲಿ ದೂಳೆಬ್ಬಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಫ್ಯಾನ್ಸ್‍ಗಳಿಗೆ ಸಣ್ಣದೊಂದು ನಿರೀಕ್ಷೆ ಹುಟ್ಟಿಸಿದ್ದಾರೆ. ಈಗ ದಚ್ಚು ಫ್ಯಾನ್ಸ್ ಕಣ್ಣಿಗೆ ಕೇವಲ ಸಿನಿಸ್ಟಾರ್ ಅಲ್ಲ. ಸಮಸ್ಯೆಗೆ ಸ್ಪಂದಿಸುವ ಆಪ್ತರಕ್ಷಕನಾಗ್ತಾರೆ ಅನ್ನುವ ಭರವಸೆ ಇಟ್ಟುಕೊಂಡ ಹಾಗೆ ಕಾಣುತ್ತೆ. ಮಂಡ್ಯದಲ್ಲಿ ಜನರ ಅಭಿವೃದ್ಧಿಯ ಬಗ್ಗೆ ಮಾತಾನಾಡಿದ ದರ್ಶನ್ ಅವರ ಮೇಲೆ ಬೆಂಗಳೂರಿನ ಸ್ಮಶಾನದ ಕೆಲಸಗಾರ ಭರವಸೆ ಇಟ್ಟಿದ್ದಾರೆ.

ಬೆಂಗಳೂರಿನ ಅಂಥೋನಿ ಸ್ವಾಮಿ ಕಳೆದ 20 ವರ್ಷಗಳಿಂದ ಹೆಣ ಸುಡುವ ಕಾಯಕ ಮಾಡುತ್ತಿದ್ದಾರೆ. ಕಲ್ಲಳ್ಳಿ ಸ್ಮಶಾನದಲ್ಲಿ ಹೆಣ ಸುಡುವ ಕಾಯಕದಲ್ಲಿ ಇಡೀ ಕುಟುಂಬ ತೊಡಗಿಕೊಂಡಿದೆ. ಆದರೆ ಇವರಿಗೆ ಬಿಬಿಎಂಪಿ ನಿಗದಿ ಪಡಿಸಿದ 1 ಸಾವಿರ ವೇತನವನ್ನು ಕಳೆದ ಎಂಟು ವರ್ಷಗಳಿಂದ ನೀಡಿಲ್ಲ. ಸಹಾಯಧನ ನೀಡಿ ಎಂದು ಎಲ್ಲಾ ಅಧಿಕಾರಿಗಳಿಗೆ, ಸಚಿವರುಗಳಿಗೆ ನೀಡಿದರೂ ಪ್ರಯೋಜನವಾಗಿಲ್ಲ. ಆಗ ಅಂಥೋನಿಗೆ ದರ್ಶನ್ ಅವರು ನೆನಪಾಗಿದ್ದಾರೆ.

ಅಂಥೋನಿ ಸ್ವಾಮಿಗೆ ಡಿಬಾಸ್ ಹೊಸ ಪರಿಚಯವೇನಲ್ಲ. ಈ ಹಿಂದೆ ದರ್ಶನ್ ತಮ್ಮ ಸಂಬಂಧಿಕರ ಶವ ಸುಡಲು ಇಲ್ಲಿ ಬಂದಾಗ ಆಂಥೋನಿಯವರನ್ನು ಮಾತಾನಾಡಿಸಿದ್ದರು. ಅಷ್ಟೇ ಅಲ್ಲ ಅವರು ಉಚಿತವಾಗಿ ಶವ ಸುಡುವ ಕೆಲಸವನ್ನು ನೋಡಿ ದುಡ್ಡು ಕೊಟ್ಟಿದ್ದರು. ಈಗ ಅಂಥೋನಿಗೆ ಸಂಬಳ ಸಿಗುತ್ತಿಲ್ಲ. ಮಂಡ್ಯದಲ್ಲಿ ರಾಜಕೀಯ ಮುಖಂಡರ ಚಳಿ ಬಿಡಿಸಿದ ದರ್ಶನ್‍ಗೆ ತನ್ನ ಮಗಳ ಕೈಯಲ್ಲಿ ಪತ್ರ ಬರೆದಿರುವ ಅಂಥೋನಿ ನನ್ನ ಸಂಬಳವನ್ನು ಹೇಗಾದ್ರೂ ಮಾಡಿ ಕೊಡಿಸಿ ಎಂದು ದರ್ಶನ್‍ಗೆ ಮನವಿ ಮಾಡಲಿದ್ದಾರೆ.

ಪತ್ರದಲ್ಲಿ ಏನಿದೆ?
ನಾನು 30 ವರ್ಷದಿಂದ ಕಲ್ಲಳ್ಳಿ ಸ್ಮಶಾನದಲ್ಲಿ ವಿದ್ಯುತ್ ಚಿತಗಾರ ಕೆಲಸವನ್ನು ಮಾಡಿಕೊಂಡಿದ್ದೇನೆ. ಇಲ್ಲಿ ಕೆಲಸ ಮಾಡುವವರೆಲ್ಲರಿಗೂ ನಿಮ್ಮ ಮೇಲೆ ಅಪಾರ ಗೌರವವಿದೆ. ಆದರೆ ಅವರ ಮನೆಗಳಲ್ಲಿಯೂ ಸಹ ಪರಿಸ್ಥಿತಿ ಸರಿಯಿಲ್ಲ. ಅವರೆಲ್ಲರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಈ ಸ್ಮಶಾನದಲ್ಲಿ ಕೆಲಸ ಮಾಡಿ ಬಾಡಿಗೆ ಮತ್ತು ಕುಟುಂಬವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಮತ್ತು ಇಲ್ಲಿ ಕೆಲಸ ಮಾಡುವವರ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸಹ ಬಹಳ ಕಷ್ಟವಾಗಿದೆ.

ಅವರಲ್ಲಿ ಒಬ್ಬನ ಮಗು ಅಂಗವೈಕಲ್ಯಕ್ಕೆ ತುತ್ತಾಗಿದೆ. ಆ ಮಗುವಿಗೆ ಚಿಕಿತ್ಸೆ ನೀಡಲು ಬಹಳ ಕಷ್ಟವಾಗಿದೆ. ಎಷ್ಟೋ ರಾಜಕಾರಣಿಗಳಿಗೆ ಮತ್ತು ಬಿಬಿಎಂಪಿಯವರಿಗೂ ತಿಳಿಸಿದ್ದೇನೆ. ಆದರೆ ಯಾವ ಪ್ರಯೋಜನವಾಗಿಲ್ಲ. ನಿಮ್ಮ ಸೇವಾ ಮನೋಭಾವ ನೋಡಿ ನಿಮ್ಮನ್ನು ಕೇಳಿದರೆ ಏನಾದರೂ ಸಹಾಯವಾಗಬಹುದು ಎಂಬ ನಂಬಿಕೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ನಿಮ್ಮ ಹಸ್ತದಲ್ಲಾದ ಸಹಾಯವನ್ನು ಮಾಡಬೇಕೆಂದು ಕೋರಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ದರ್ಶನ್ ತನಗೆ ಸಹಾಯ ಮಾಡೇ ಮಾಡುತ್?

Recommended