ಅಂದದ ತ್ವಚೆಗೆ ಪಾಲಕ್ ಸೊಪ್ಪಿನ ಫೇಸ್‌ಪ್ಯಾಕ್ | Boldsky
  • 6 years ago
ಪಾಲಕ್‌ ಸೊಪ್ಪಿನಲ್ಲಿ ವಿಟಮಿನ್ ಅಂಶ ತುಂಬಾ ಇರುತ್ತದೆ ಹಾಗಾಗಿ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅನ್ನೋದು ನಮಗೆಲ್ಲಾ ಗೊತ್ತು. ಪಾಲಕ್‌ ಸೊಪ್ಪನ್ನು ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ಬಳಸೋದರಿಂದ ಕಬ್ಬಿಣದ ಅಂಶವೂ ಹೆಚ್ಚಾಗಿ ಸಿಗುತ್ತದೆ. ಈ ಪಾಲಕ್‌ ಸೊಪ್ಪು ಬರೀ ನಮ್ಮ ಆರೋಗ್ಯಕ್ಕೆ ಅಷ್ಟೇ ಅಲ್ಲ ಮುಖದ ಅಂದಕ್ಕೂ ಒಳ್ಳೆಯದು. ಪಾಲಕ್‌ ಸೊಪ್ಪಿನ ಫೇಸ್‌ಪ್ಯಾಕ್‌ ಮುಖಕ್ಕೆ ಹಚ್ಚೋದರಿಂದ ಮುಖ ಹೊಳಪನ್ನು ಪಡೆಯುತ್ತದೆ. ಜೊತೆಗೆ ಚರ್ಮವು ಕೋಮಲವಾಗುತ್ತದೆ. ಈ ಪಾಲಕ್‌ಸೊಪ್ಪಿನ ಫೇಸ್‌ಪ್ಯಾಕ್‌ ಮಾಡೋದು ತುಂಬಾನೇ ಸುಲಭ. ಪಾಲಕ್‌ ಸೊಪ್ಪು, ಕಡಲೆ ಹಿಟ್ಟು, ಜೇನುತುಪ್ಪ ಹಾಗೂ ಸ್ವಲ್ಪ ಹಾಲು ಇದ್ದರೆ ಸಾಕು. ಪಾಲಕ್‌ಸೊಪ್ಪಿನ ಫೇಸ್‌ಪ್ಯಾಕ್‌ನ್ನು ವಾರಕ್ಕೆರಡು ಬಾರಿ ಹಚ್ಚಿಕೊಳ್ಳುತ್ತಿದ್ದರೆ ನಿಮ್ಮ ಮುಖ ಕಾಂತಿಯನ್ನು ಪಡೆದುಕೊಳ್ಳುತ್ತದೆ. ಪಾಲಕ್ ಫೇಸ್‌ಪ್ಯಾಕ್ ಮಾಡೋದು ಹೇಗೆ ಅನ್ನೋದನ್ನು ಈ ವಿಡಿಯೋ ಮೂಲಕ ನೋಡೊಣ.
Recommended