ಬಹಳ ಸುಲಭವಾಗಿ ಲಂಕಾ ವಿರುದ್ಧ ಸರಣಿ ಗೆದ್ದುಕೊಂಡ ಇಂಡಿಯಾ | Oneindia Kannada

  • 6 years ago
ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 215ರನ್ನಿಗೆ ಟೀಂ ಇಂಡಿಯಾ ನಿಯಂತ್ರಿಸಿದೆ. ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚಾಹಲ್ ತಲಾ 3 ವಿಕೆಟ್ ಗಳಿಸಿದರು. 2015ರ ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಕಂಡಿದ್ದ ಭಾರತ, ಆ ನಂತರ ಗೆಲುವಿನ ನಾಗಾಲೋಟ ಮುಂದುವರೆಸಿದೆ. ಇನ್ನೊಂದೆಡೆ ಶ್ರೀಲಂಕಾ ತಂಡ ದ್ವಿಪಕ್ಷೀಯ ಸರಣಿಯಲ್ಲಿ ಮೊದಲ ಸರಣಿ ಜಯದ ನಿರೀಕ್ಷೆಯಲ್ಲಿದೆ. ಧರ್ಮಶಾಲದಲ್ಲಿ ಮೊದಲ ಪಂದ್ಯ ಸೋತ ರೋಹಿತ್ ಪಡೆ, ಮೊಹಾಲಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಜಯಭೇರಿ ಬಾರಿಸಿದ್ದರಿಂದ ಸರಣಿ 1-1ರ ಸಮಬಲ ಕಂಡಿತ್ತು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರು ಟಾಸ್ ಗೆದ್ದು, ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು . ಅಜಿಂಕ್ಯ ರಹಾನೆ ಅವರು ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸ್ಥಾನ ಸಿಕ್ಕಿತ್ತು .

Team have done it yet again. Rohit Sharma team after losing the first match have won both the following matches and won the bilateral series.

Recommended